February 3, 2026

ಮಡಿಕೇರಿ: ಊಟದಲ್ಲಿ ಸ್ವೀಟ್ ಸಿಗಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಮುರಿದುಬಿದ್ದ ಮದುವೆ

0
image_editor_output_image159297347-1715064071094.jpg

ಕೊಡಗು: ವರನ ಸ್ನೇಹಿತರಿಗೆ ಊಟದಲ್ಲಿ ಸ್ವೀಟ್ ಸಿಗಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಕಲ್ಯಾಣ ಮಂಟಪದಲ್ಲೇ ಮದುವೆ ಮುರಿದುಬಿದ್ದು, ವಧುವಿನ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ ವಿಚಿತ್ರ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿ ನಡೆದಿದೆ.

ಹಾನಗಲ್‌ನ ಯುವತಿ ಹಾಗೂ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಿವಿಲ್ ಇಂಜಿನೀಯರ್ ಆಗಿರುವ ತುಮಕೂರಿನ ಹರ್ಷಿತ್ ಎಂಬಾತನೊಂದಿಗೆ ವಿವಾಹ ನಿಶ್ಚಯವಾಗಿತ್ತು. ವಧು-ವರರಿಬ್ಬರು ಮ್ಯಾಟ್ರಿಮೊನಿಯಲ್ಲಿ ಪರಿಚಯವಾಗಿ, ಯುವತಿಯನ್ನು ವಿವಾಹವಾಗಲು ಹರ್ಷಿತ್ ಒಪ್ಪಿಕೊಂಡಿದ್ದ.

ಅದರಂತಯೇ ಶನಿವಾರ ರಾತ್ರಿ ಸೋಮವಾರಪೇಟೆಯ ಜಾನಕಿ ಕನ್ವೆನ್ಷನ್ ಹಾಲ್‌ನಲ್ಲಿ ವಿವಾಹ ಸಮಾರಂಭ ನಡೆದಿತ್ತು. ಭಾನುವಾರ ನಡೆಯಬೇಕಿದ್ದ ವಿವಾಹ, ಅದಕ್ಕೂ ಮೊದಲು ಶನಿವಾರ ರಾತ್ರಿ ಕಲ್ಯಾಣ ಮಂಟಪದಲ್ಲಿ ನಿಶ್ಚಿತಾರ್ಥ ಕಾರ್ಯ ನಡೆಸಿದ್ದರು. ಅಂದು ಸಂಜೆ ನಾಲ್ಕು ಗಂಟೆಗೆ ಕಲ್ಯಾಣ ಮಂಟಪಕ್ಕೆ ಬಂದಿದ್ದ ವರ ಮತ್ತು ಕುಟುಂಬಸ್ಥರು, ಆದರೆ ವಧು ಮತ್ತು ಕುಟುಂಬದವರು ಕಲ್ಯಾಣಮಂಟಕ್ಕೆ 2ಗಂಟೆ ತಡವಾಗಿ ಬಂದಿದ್ದರು.

ಈ ವಿಚಾರಕ್ಕೆ ವರನ ಕಡೆಯವರಿಂದ ಗಲಾಟೆ ಶುರುವಾಗಿದೆ ಎಂದು ಆರೋಪಿಸಿಲಾಗಿದೆ. ಇದರ ನಡುವೆ ವರನ ಸ್ನೇಹಿತರು ಊಟ ಕುಳಿತಾಗ ಸ್ವೀಟ್ ಖಾಲಿಯಾಗಿದೆ, ಸ್ನೇಹಿತರ ಸ್ವೀಟ್‌ ಸಿಕ್ಕಿಲ್ಲ ಎಂಬ ಕಾರಣಕ್ಕೆ ವಧುವಿನ ಕುಟುಂಬಸ್ಥರ ನಡುವೆ ವರ ಹರ್ಷಿತ್ ಗಲಾಟೆ ಮಾಡಿಕೊಂಡಿದ್ದಾನೆ. ಗಲಾಟೆ ವಿಕೋಪಕ್ಕೆ ತಿರುಗಿ ಭಾನುವಾರ ನಡೆಯಬೇಕಿದ್ದ ವಿವಾಹ ಮುರಿದುಬಿದ್ದಿದೆ.

Leave a Reply

Your email address will not be published. Required fields are marked *

error: Content is protected !!