March 23, 2026

ಕಾರವಾರ: ಈಜಾಡಲು ಹೋಗಿದ್ದ ಯುವಕರ ಪೈಕಿ ಇಬ್ಬರು ಸಮುದ್ರದಲ್ಲಿ ಮುಳುಗಿ ಮೃತ್ಯು

0
image_editor_output_image322854967-1714970722156.jpg

ಕಾರವಾರ: ಈಜಾಡಲು ಹೋಗಿದ್ದ ಯುವಕರ ಪೈಕಿ ಇಬ್ಬರು ಸಮುದ್ರದಲ್ಲಿ ಮುಳುಗಿ ಮೃತಪಟ್ಟ ದುರ್ಘಟನೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಸಮುದ್ರದಲ್ಲಿ ನಡೆದಿದೆ.

ಮೌಲ್ವಿ ಇಸ್ಮಾಯಿಲ್ ಬರ್ಮಾವರ್ (22), ಶಿವಮೊಗ್ಗ ಶಿರಾಳಕೊಪ್ಪದ ಇನ್ನೋರ್ವ ಯುವಕ ಮೃತಪಟ್ಟಿದ್ದಾರೆ.

ಭಾನುವಾರ ಸಂಜೆ ಮುರುಡೇಶ್ವರ ಸಮುದ್ರದಲ್ಲಿ ಈಜಾಡಲು ಇಳಿದ ನಾಲ್ವರು ಯುವಕರು ಅಲೆಗಳ ರಭಸಕ್ಕೆ ಸಿಕ್ಕಿಹಾಕಿದ್ದರು. ಇದನ್ನ ಗಮನಿಸಿದ ಲೈಫ್‌ಗಾರ್ಡ್ಸ್ ದೋಣಿಯ ಸಹಾಯದಿಂದ ನಾಲ್ವರನ್ನೂ ದಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇಬ್ಬರು ಸಮುದ್ರದಲ್ಲಿಯೇ ಪ್ರಜ್ಞೆ ಕಳೆದುಕೊಂಡಿದ್ದರು. ತಕ್ಷಣ ಯುವಕರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!