ಪ್ರಜ್ವಲ್ ರೇವಣ್ಣ ಅಷ್ಟೇ ಅಲ್ಲ, ಇನ್ನೂ ತುಂಬ ಜನರದ್ದು ವಿಡಿಯೋಗಳು ಹೊರಬರಲಿವೆ: ಕೆ.ಎಸ್. ಈಶ್ವರಪ್ಪ
ಶಿವಮೊಗ್ಗ: ಪ್ರಜ್ವಲ್ ರೇವಣ್ಣ ಅಷ್ಟೇ ಅಲ್ಲ. ರಾಜ್ಯದಲ್ಲಿಇನ್ನೂ ತುಂಬ ಜನರದ್ದು ವಿಡಿಯೋಗಳಿವೆ. ಅವುಗಳು ಬರುವವರು ದಿನಗಳಲ್ಲಿ ಹೊರಬರಲಿವೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ, ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ” ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಂಡಿಲ್ಲ ಎನ್ನುವುದಾದರೆ, ಯಡಿಯೂರಪ್ಪ ಅವರು ಹುಚ್ಚರಾಯಸ್ವಾಮಿ ಮೇಲೆ ಆಣೆ ಮಾಡಲಿ. ಈ ಒಳ ಹೊಂದಾಣಿಕೆಗಳಿಂದಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ವಿಫಲವಾಗುತ್ತವೆ ” ಎಂದರು.




