September 25, 2026

ಮಗನಿಗೆ ಈಜು ಕಲಿಸಲು ಹೋದ ತಂದೆ ಕೃಷಿ ಹೊಂಡದಲ್ಲಿ ಮುಳುಗಿ ಸಾವು

0
image_editor_output_image515255151-1714964119205.jpg

ಚಿಕ್ಕಬಳ್ಳಾಪುರ: ಮಗನಿಗೆ ಈಜು ಕಲಿಸಲು ಹೋದ ತಂದೆ ಕೃಷಿ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೋನಪ್ಪಲ್ಲಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಅಂಗಡಿ ಬಾಬು (45) ಮೃತ ತಂದೆ. ಬಾಬು ತನ್ನ ಮಗ ತೇಜುವಿಗೆ ಗ್ರಾಮದ ಕೆ.ನಾರಾಯಣಸ್ವಾಮಿ ಎಂಬವರ ಕೃಷಿ ಹೊಂಡದಲ್ಲಿ ಈಜು ಕಲಿಸಲು ಮುಂದಾಗಿದ್ದರು.

 

ಮಗನಿಗೆ ತರಬೇತಿ ನೀಡಿ ದಡಕ್ಕೆ ತಲುಪಿಸಿದ ತಂದೆ ಮರಳಿ ಕಾಲುಜಾರಿ ಕೃಷಿ ಹೊಂಡದಲ್ಲಿ ಬಿದ್ದಿದ್ದು, ಮತ್ತೆ ಮೇಲೆ ಬರಲಾಗದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!