February 4, 2026

ಉಳ್ಳಾಲ: ಸಮುದ್ರ ಪಾಲಾಗುತ್ತಿದ್ದ ನರ್ಸಿಂಗ್‌ ಕಾಲೇಜಿನ ವಿದ್ಯಾರ್ಥಿಯ ರಕ್ಷಣೆ

0
image_editor_output_image-33532445-1714962981733.jpg

ಉಳ್ಳಾಲ: ಸಮುದ್ರ ಪಾಲಾಗುತ್ತಿದ್ದ ದೇರಳಕಟ್ಟೆ ಖಾಸಗಿ ನರ್ಸಿಂಗ್‌ ಕಾಲೇಜಿನ ವಿದ್ಯಾರ್ಥಿಯನ್ನು ಕರಾವಳಿ ಕಾವಲು ಪಡೆಯ ಸಿಬಂದಿ ಅಶೋಕ್‌ ಸೋಮೇಶ್ವರ ರಕ್ಷಿಸಿದ್ದಾರೆ. ಯುವಕನಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಮೈಸೂರು ನಿವಾಸಿ ಕಿರಣ್‌ (22) ಸಮುದ್ರ ಪಾಲಾಗಿ ರಕ್ಷಣೆಯಾದ ವಿದ್ಯಾರ್ಥಿಯಾಗಿದ್ದು, ಸಹಪಾಠಿಗಳೊಂದಿಗೆ ಉಳ್ಳಾಲ ಸಮುದ್ರ ತೀರಕ್ಕೆಬಂದಿದ್ದರು.

ಸಂಜೆ ವೇಳೆಗೆ ಸಮುದ್ರದ ಅಲೆಗಳೊಂದಿಗೆ ಆಟವಾಡುತ್ತಿದ್ದಾಗ ಅವಘಡ ಸಂಭವಿಸಿತು. ಆಗ ಕರಾವಳಿ ಕಾವಲು ಪಡೆಯಿಂದ ನಿಯುಕ್ತಿಗೊಂಡಿದ್ದ ಜೀವರಕ್ಷಕ ಅಶೋಕ್‌ ಸ್ಥಳದಲ್ಲಿದ್ದು, ವಿದ್ಯಾರ್ಥಿಗಳು ಬೊಬ್ಬೆ ಹಾಕುತ್ತಿದ್ದಂತೆ ಸಮುದ್ರಕ್ಕೆ ಹಾರಿ ಸಮುದ್ರ ಪಾಲಾಗುತ್ತಿದ್ದ ಕಿರಣ್‌ನನ್ನು ರಕ್ಷಿಸಿದರು.

Leave a Reply

Your email address will not be published. Required fields are marked *

error: Content is protected !!