ಜಾನುವಾರುಗಳನ್ನು ಸಾಗಿಸುತ್ತಿದ್ದಾಗ ಸಂಘಪರಿವಾರದ ಕಾರ್ಯಕರ್ತರಿಂದ ಗೂಂಡಾಗಿರಿ: ಚಾಲಕನಿಗೆ ಮಾರಣಾಂತಿಕ ಹಲ್ಲೆ
ವಿಜಯಪುರ: ಗೂಡ್ಸ್ ವಾಹನದಲ್ಲಿ ಜಾನುವಾರುಗಳನ್ನ ಸಾಗಿಸುತ್ತಿದ್ದ ವೇಳೆ ವಾಹನ ತಡೆದು ಚಾಲಕನ ಮೇಲೆ ಸಂಘಪರಿವಾರದಿಂದ ಚಾಲಕನ ಮೇಲೆ ಹಲ್ಲೆ ಮಾಡಿದ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಬ್ರಿಡ್ಜ್ ಬಳಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಬಂದೇನವಾಜ್ ಜಾತಗಾರ ಹಲ್ಲೆಗೊಳಗಾದವ. ಹಲ್ಲೆ ನಡೆಸಿರುವ ವೀರೇಶ್ ಹಿರೇಮಠ, ರಾಜು ಬಿರಾದಾರ ಸೇರಿದಂತೆ 15-20ಕ್ಕೂ ಹೆಚ್ಚು ಬಜರಂಗದಳದಲ್ಲಿ ಗುರುತಿಸಿಕೊಂಡಿದ್ದಾರೆ.. ಹಲ್ಲೆ ಬಳಿಕ ಪರಾರಿಯಾಗಿದ್ದಾರೆ.
ಗಾಯಾಳು ಜಾತಗಾರ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬಬಲೇಶ್ವರದಿಂದ ವಿಜಯಪುರಕ್ಕೆ ಹೊರಟಿದ್ದ ಗೂಡ್ಸ್ ವಾಹನದಲ್ಲಿ ಎರಡು ಹೋರಿ, ಒಂದು ಆಕಳು, ಒಂದು ಎಮ್ಮೆಯ ಕರು ಸಾಗಿಸಲಾಗುತ್ತಿತ್ತು. ಸಾಗಿಸುವಾಗ ಗೂಡ್ಸ್ ವಾಹನ ತಡೆದು ನಿಲ್ಲಿಸಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಸದ್ಯ ಹಲ್ಲೆ ಘಟನೆ ಸಂಬಂಧ ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿಸಿದ್ದಾರೆ.





