April 6, 2025

ಶಿವಮೊಗ್ಗ: ಮೆಂಟಲ್ ಸೂರಿ ಹತ್ಯೆ ಪ್ರಕರಣ: ಅಪ್ರಾಪ್ತ ವಯಸ್ಸಿನ ಪುತ್ರನ ಸಹಿತ ಮೂವರ ಬಂಧನ

0

ಶಿವಮೊಗ್ಗ: ಜಿಲ್ಲೆಯಲ್ಲಿ ಮನೆ ಕಳ್ಳತನ, ದರೋಡೆ ಸೇರಿದಂತೆ ಪ್ರಮುಖ ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸರಿಗೆ ತಲೆನೋವು ತಂದಿಡುತ್ತಿದ್ದ ಸುರೇಶ್ ಅಲಿಯಾಸ್ ಮೆಂಟಲ್ ಸೂರಿ(45)ಯನ್ನ ಶಿವಮೊಗ್ಗ ಬಾಪೂಜಿನಗರದ 7ನೇ ಕ್ರಾಸ್ ನಲ್ಲಿರುವ ಶ್ರೀ ಗಂಗಾಮಸ್ಥರ ದೇವಸ್ಥಾನದ ಸಮೀಪದ ಹೋಟೆಲ್ ಬಳಿ ಭೀಕರವಾಗಿ ಹತ್ಯೆಯಾಗಿತ್ತು.

ಈ ಕೊಲೆ ಮಾಡಿದ ಹಂತಕರು ಎಸ್ಕೇಪ್ ಆಗಿದ್ದರು. ಕಳೆದ ಒಂದು ವಾರದ ಹಿಂದೆ ನಡೆದ ಕೊಲೆ ಪ್ರಕರಣವನ್ನು ಕೋಟೆ ಪೊಲೀಸರು ಇದೀಗ ಬೇಧಿಸಿದ್ದಾರೆ. ಮೃತನ ಸಂಬಂಧಿ ರಾಕೇಶ್, ಆತನ ಸ್ನೇಹಿತ ಪ್ರವೀಣ್ ಮತ್ತು ಮೃತನ ಅಪ್ರಾಪ್ತ ಮಗ ಸೇರಿ ಮೂವರನ್ನು ಬಂಧಿಸಿದ್ದಾರೆ.

 

 

Leave a Reply

Your email address will not be published. Required fields are marked *

error: Content is protected !!