February 4, 2026

ಕಾಸರಗೋಡು: ದಾರಿ ಕೇಳುವ ನೆಪದಲ್ಲಿ ಬೈಕ್ ನಲ್ಲಿ ಬಂದ ವ್ಯಕ್ತಿಗಳಿಂದ ಚಿನ್ನದ ಸರ ಕಸಿದು ಪರಾರಿ

0
image_editor_output_image741345650-1714370833125.jpg

ಕಾಸರಗೋಡು: ದಾರಿ ಕೇಳುವ ನೆಪದಲ್ಲಿ ಬೈಕ್ ನಲ್ಲಿ ಬಂದು ವ್ಯಕ್ತಿಯ ಕುತ್ತಿಗೆಯಲ್ಲಿದ್ದ ಸುಮಾರು ಎರಡೂವರೆ ಪವನ್ ನ ಚಿನ್ನದ ಸರ ಎಗರಿಸಿ ಪರಾರಿಯಾದ ಘಟನೆ ಶನಿವಾರ ಬೆಳಿಗ್ಗೆ ಪೈವಳಿಕೆ – ಚೇವಾರ್ ರಸ್ತೆಯ ಕಟ್ಟದಮನೆ ಎಂಬಲ್ಲಿ ನಡೆದಿದೆ.

ಕಟ್ಟದಮನೆ ಗೋಪಾಲ ಕೃಷ್ಣ ಭಟ್ ರವರ ಕುತ್ತಿಗೆಯಿಂದ ಸರ ಎಗರಿಸಲಾಗಿದೆ. ಗೋಪಾಲ ಕೃಷ್ಣ ಭಟ್ ರವರು ಬೆಳಿಗ್ಗೆ ಮನೆ ಸಮೀಪದ ತೋಟಕ್ಕೆ ರಸ್ತೆಯಲ್ಲಿ ನಡೆದು ಕೊಂಡು ಹೋಗುತ್ತಿದ್ದಾಗ ಬೈಕ್ ನಲ್ಲಿ ಹೆಲ್ಮೆಟ್ ಧಾರಿಯಾಗಿ ಬಂದ ಇಬ್ಬರು ಹಿಂಬಾಲಿಸಿ ತೋಟಕ್ಕೆತಲಪುತ್ತಿದ್ದಂತೆ ದಾರಿ ಕೇಳಿ ಹತ್ತಿರ ಬಂದು ಓರ್ವ ಕುತ್ತಿಗೆಯಿಂದ ಚಿನ್ನದ ಸರ ಎಳೆದು ಅದೇ ಬೈಕ್ ನಲ್ಲಿ ಪರಾರಿಯಾಗಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!