ಬಂಟ್ವಾಳ: ಹೆಚ್ಚುವರಿ ಟೆಂಟ್ ಗಳನ್ನು ತೆರವುಗೊಳಿಸಿದ ಪೊಲೀಸರು
ಬಂಟ್ವಾಳ: ಚುನಾವಣಾ ಅಧಿಕಾರಿಗಳು ನೀಡಿರುವಂತಹ ಪರವಾನಿಗೆಯನ್ನು ಉಲ್ಲಂಘಿಸಿ ಹೆಚ್ಚುವರಿಯಾಗಿ ಬೂತ್ ನ ಹೊರಗಡೆಯಲ್ಲಿ ಟೆಂಟ್ ಹಾಕಿರುವುದನ್ನು ಬಂಟ್ವಾಳ ಪೋಲೀಸರು ತೆರವುಗೊಳಿಸಿದ ಘಟನೆ ಬಂಟ್ವಾಳದ ಕಲ್ಲಡ್ಕದಲ್ಲಿ ನಡೆದಿದೆ.
ಕಲ್ಲಡ್ಕ ಮಾದರಿ ಸರಕಾರಿ ಶಾಲೆಯಲ್ಲಿ ಒಂದಕ್ಕಿಂತ ಹೆಚ್ಚು ಬೂತ್ ಗಳಿದ್ದು, ಹೀಗಾಗಿ ಬಿಜೆಪಿ ಹಾಗೂ ಕಾಂಗ್ರೇಸ್ ಮುಖಂಡರು ಮತಗಟ್ಟೆಯ ಹೊರಭಾಗದಲ್ಲಿ ಮೂರು ಟೆಂಟ್ ಗಳನ್ನು ಅಳವಡಿಸಿದ್ದರು.





