ಮತದಾನದ ಸಂದೇಶ ಮುದ್ರತ ಸೀರೆಯಲ್ಲಿ ಮಿಂಚಿದ ಮಹಿಳಾ ಅಧಿಕಾರಿಗಳು
ಚಾಮರಾಜನಗರ: ಚುನಾವಣೆಯಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸಲು ಶ್ರಮಿಸುತ್ತಿರುವ ಜಿಲ್ಲಾ ಸ್ವೀಪ್ ಸಮಿತಿ, ಕೈಮಗ್ಗದ ರೇಷ್ಮೆ ಸೀರೆಗಳಲ್ಲೂ ಜಾಗೃತಿ ಸಂದೇಶವನ್ನು ಮುದ್ರಿಸಿದೆ.
ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾ ನಾಗ್ಗ, ಜಿಲ್ಲಾ ಸ್ವೀಪ್ ನೋಡೆಲ್ ಅಧಿಕಾರಿ ಲಕ್ಷ್ಮಿ ಹಾಗೂ ಚಾಮರಾಜನಗರ ಸಹಾಯಕ ಚುನಾವಣಾಧಿಕಾರಿ ಸವಿತಾ ಸೇರಿದಂತೆ ಉನ್ನತ ಅಧಿಕಾರಿಗಳು ಮತದಾನದ ದಿನ ಆ ಸೀರೆಗಳನ್ನು ಧರಿಸಿ ಮಿಂಚಿದರು.





