ಕಾಪು: ಟಿಪ್ಪರ್ ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ
ಕಾಪು: ಟಿಪ್ಪರ್ ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವುದನ್ನು ಉದ್ಯಾವರ ಚೆಕ್‌ಪೋಸ್ಟ್ ಬಳಿ ಚುನಾವಣ ಕರ್ತವ್ಯ ನಿರತ ಸಿಬಂದಿ ಪತ್ತೆ ಹಚ್ಚಿದ್ದಾರೆ.
ಉದ್ಯಾವರ ಚೆಕ್‌ಪೋಸ್ಟ್‌ನಲ್ಲಿ ಉಡುಪಿ ಕಡೆಗೆ ಬಂದ ಟಿಪ್ಪರ್ ಲಾರಿಯನ್ನು ಪರಿಶೀಲಿಸಿದಾಗ ವಾಹನದಲ್ಲಿ 1 ಯುನಿಟ್‌ನಷ್ಟು ಮರಳು ಇರುವುದು ಪತ್ತೆಯಾಗಿತ್ತು.
ಈ ಬಗ್ಗೆ ವಾಹನದ ಚಾಲಕನಲ್ಲಿ ಮರಳು ಮತ್ತು ವಾಹನದ ಪರವಾನಿಗೆ ಬಗ್ಗೆ ಕೇಳಿದಾಗ ವಾಹನವು ಪ್ರಭಾಕರ್ ಅವರಿಗೆ ಸೇರಿದ್ದಾಗಿದ್ದು ಅವರ ಸಹೋದರ ಹರೀಶ ಅವರ ಹೊಸ ಮನೆ ನಿರ್ಮಾಣ ಕಾಮಗಾರಿಯಿಂದ ಉಳಿದ ಮರಳನ್ನು ಉದ್ಯಾವರ ಬೊಳೆಗೆ ಸಾಗಾಟ ಮಾಡುತ್ತಿರುವುದಾಗಿ ತಿಳಿಸಿದ್ದ.
ಈ ಸಂಬಂಧ ಬಾಗಲಕೋಟೆ ಮೂಲದ ಟಿಪ್ಪರ್ ಚಾಲಕ ಶಿವಾನಂದ ಬಿ. ನೇಕಾರನನ್ನು ವಶಕ್ಕೆ ತೆಗೆದುಕೊಂಡಿರುವ ಅಧಿಕಾರಿಗಳು ಟಿಪ್ಪರ್ ಲಾರಿ ಸಹಿತ ಮರಳನ್ನು ಕಾಪು ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




