ಬೆಂಕಿ ಹಚ್ಚಿಕೊಂಡು ಉಪನ್ಯಾಸಕ ಆತ್ಮಹತ್ಯೆ
ನಂಜನಗೂಡು: ನಗರದ ವಿ.ಎ. ಬಡಾವಣೆ ನಿವಾಸಿ ಮತ್ತು ಚಾಮರಾಜನಗರ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ಮಾದಪ್ಪ (46) ಹೊರವಲಯದ ಹೊಸಹಳ್ಳಿ ಗೇಟ್ ಬಳಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವರ ಪತ್ನಿ ಇಲ್ಲಿನ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದು, 16 ವರ್ಷದ ಪುತ್ರಿ ಇದ್ದಾರೆ.
ಇಲ್ಲಿ ಸ್ವಂತ ಮನೆಯನ್ನು ನಿರ್ಮಿಸಿದ್ದ ಅವರು, ಕೆಲವು ತಿಂಗಳಿಂದ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಮತ್ತು ಯಾರೊಂದಿಗೂ ಬೆರೆಯುತ್ತಿರಲಿಲ್ಲ ಎನ್ನಲಾಗಿದೆ.