ಲಾರಿ ಹರಿದು ಬಾಲಕ ಸಾವು
ಬೆಂಗಳೂರು: ತಾಯಿ ಜೊತೆಗೆ ಮೊಬೈಲ್ ಅಂಗಡಿಗೆ ಬಂದಿದ್ದ ಪುಟ್ಟ ಕಂದನ ಮೇಲೆ ಲಾರಿ ಹರಿದ ಪರಿಣಾಮ ಮಗುವಿನ ದೇಹ ಛಿದ್ರವಾಗಿ ದಾರುಣವಾಗಿ ಮೃತಪಟ್ಟ ಘಟನೆ ನಗರದ ರಾಮೋಹಳ್ಳಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಸಂಜೆ 5.30ರ ಸುಮಾರಿಗೆ ನಡೆದಿರುವ ಘಟನೆ. ಅಪಘಾತದಲ್ಲಿ ಆಯುಷ್ಯ್(4) ಮೃತ ಮಗು. ಲಾರಿ ಹರಿದ ರಭಸಕ್ಕೆ ಸ್ಥಳದಲ್ಲೇ ದುರ್ಮರಣ. ಉತ್ತರ ಭಾರತದಿಂದ ರಾಮೋಹಳ್ಳಿಗೆ ಬಂದು ಪೇಂಟಿಂಗ್ ಕೆಲಸ ಮಾಡುತ್ತಿರುವ ಅಮರ್ ಹಾಗೂ ಪೂಜಾ ದಂಪತಿಗಳಿಗೆ ಸೇರಿದ ಮಗು.
ದಂಪತಿಗೆ ಅವಳಿ-ಜವಳಿ ಮಕ್ಕಳು. ಇಬ್ಬರು ಮಕ್ಕಳಲ್ಲಿ ಒಂದು ಮಗು ತಾಯಿಯೊಂದಿಗೆ ಅಂಗಡಿಯಲ್ಲಿತ್ತು. ಆದರೆ ಇನ್ನೊಂದು ಮಗು ಆಯ್ಯುಷ್ ತಾಯಿ ಕೈ ಬಿಡಿಸಿಕೊಂಡು ರಸ್ತೆಗೆ ಓಡಿದ್ದಾನೆ.
ಈ ವೇಳೆ ಬಸ್ ನ್ನು ಓವರ್ ಟೆಕ್ ಮಾಡಲು ಹೋಗಿ ವೇಗವಾಗಿ ಬಂದ ಟಿಪ್ಪರ್ ಲಾರಿ ಚಾಲಕ ಮಗು ಮೇಲೆ ಲಾರಿ ಹತ್ತಿಸಿದ್ದಾನೆ. ತಾಯಿ ಕಣ್ಮುಂದೆ ಮಗು ಧಾರುಣವಾಗಿ ಸಾವು. ಕಂದನ ಸಾವು ಕಂಡು ಪೋಷಕರ ಅಕ್ರಂದನ ಮುಗಿಲುಮುಟ್ಟಿದೆ.