ಕುಂದಾಪುರ, ಮಲ್ಪೆ ಸುತ್ತಮುತ್ತ ಗುಡುಗು ಸಹಿತ ಉತ್ತಮ ಮಳೆ
ಉಡುಪಿ: ಜಿಲ್ಲೆಯಲ್ಲಿ ಶುಕ್ರವಾರ ತಡರಾತ್ರಿ, ಶನಿವಾರ ಮುಂಜಾನೆ ಭಾರೀ ಮಳೆಯಾಗಿದೆ. ಉಡುಪಿ ನಗರ ಸಹಿತ ಬ್ರಹ್ಮಾವರ, ಕುಂದಾಪುರ, ಕಾರ್ಕಳ, ಬೈಂದೂರು, ಸಿದ್ದಾಪುರ, ಹೆಬ್ರಿ, ಪಡುಬಿದ್ರಿ, ಬೆಳ್ಮಣ್, ಮಲ್ಪೆ ಸುತ್ತಮುತ್ತ ಗುಡುಗು ಸಹಿತ ಉತ್ತಮ ಮಳೆ ಸುರಿದಿದೆ.
ಮಧ್ಯಾಹ್ನದ ವರೆಗೂ ಮೋಡ ಕವಿದ ವಾತಾವರಣವಿತ್ತು.ಜಿಲ್ಲೆಯಲ್ಲಿ ಕಾಪು, ಬ್ರಹ್ಮಾವರ ಭಾಗದಲ್ಲಿ ಹೆಚ್ಚು ಮಳೆ ಸುರಿದಿದ್ದು, ಜಿಲ್ಲೆಯ ಹಲವೆಡೇ ಮನೆಗಳಿಗೆ ಹಾನಿ ಸಂಭವಿಸಿದೆ.
190ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಹಲವೆಡೆ ವಿದ್ಯುತ್ ಸಂಪರ್ಕ ವ್ಯತ್ಯಯಗೊಂಡು ಜನರು ತೊಂದರೆ ಅನುಭವಿಸಿದರು.