March 17, 2026

ಬಜ್ಪೆ ಎಡಪದವು ಬಳಿ ಸರಣಿ ಅಪಘಾತ – ಹಲವು ವಾಹನಗಳು ಜಖಂ: ಮೂರು ಅಂಗಡಿ, ಖಾಸಗಿ ಬಸ್, ಕಾರು ಜಖಂ

0
image_editor_output_image245970139-1713534519305

ಮಂಗಳೂರು: ಲಾರಿಯೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಅಂಗಡಿಗೆ ಗುದ್ದಿ ಬಳಿಕ ಸರಣಿಯಾಗಿ ಹಲವು ವಾಹನಗಳಿಗೆ ಡಿಕ್ಕಿಹೊಡೆದ ಘಟನೆ ಬಜ್ಪೆಯ ಎಡಪದವು ಪೇಟೆಯಲ್ಲಿ ನಡೆದಿದೆ.

ಮಂಗಳೂರು- ಮೂಡಬಿದಿರೆ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಈ ಅವಘಡ ನಡೆದಿದ್ದು, ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಅಂಗಡಿ ಗುದ್ದಿದೆ. ಬಳಿಕ ಖಾಸಗಿ ಬಸ್, ಲಾರಿ , ಕಾರು ಸೇರಿದಂತೆ ಹಲವು ವಾಹನಗಳಿಗೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ಅದೃಷ್ಟವಶಾತ್ ಭಾರೀ ಅವಘಡ ತಪ್ಪಿ ಹೋಗಿದೆ.

ಲಾರಿ ಕಟ್ಟಡಕ್ಕೆ ಗುದ್ದಿದ ಪರಿಣಾಮ ಮೂರು ಅಂಗಡಿಗಳಿಗೆ ಭಾರಿ ಹಾನಿಯಾಗಿದೆ. ಲಾರಿ, ಖಾಸಗಿ ಬಸ್ ಜಖಂ ಗೊಂಡಿದ್ದು, ರಸ್ತೆಬದಿಯಲ್ಲಿ ನಿಲ್ಲಿಸಿದ್ದ ನಾಲ್ಕು ಸ್ಕೂಟರ್ ಗಳು ಜಖಂಗೊಂಡಿದೆ. ಸ್ಥಳಕ್ಕೆ ಬಜ್ಪೆ ಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!