ಅಳಿಕೆ ಶ್ರೀ ಸತ್ಯಸಾಯಿ ಕಾಲೇಜು ಶೇ.100 ಫಲಿತಾಂಶ: ಯಶಸ್ ಯು. ರಾಜ್ಯಕ್ಕೆ 7 ರ್ಯಾಂಕ್
ವಿಟ್ಲ: 2023-24ನೇ ಸಾಲಿನ ದ್ವಿತೀಯ ಪಿ.ಯು.ಸಿ.ಯ ಫಲಿತಾಂಶ ಪ್ರಕಟವಾಗಿದ್ದು, ಅಳಿಕೆ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜು ಶೇಕಡಾ 100 ಫಲಿತಾಂಶವನ್ನು ದಾಖಲಿಸಿದೆ.
ಒಟ್ಟು 213 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 166 ಮಂದಿ ವಿಶಿಷ್ಟ ಶ್ರೇಣಿ, 46 ಮಂದಿ ಪ್ರಥಮ ದರ್ಜೆ ಹಾಗೂ ಓರ್ವ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
ವಿಜ್ಞಾನ ವಿಭಾಗದಲ್ಲಿ ಯಶಸ್ ಯು. ಇವರು 592 ಅಂಕಗಳನ್ನು ಪಡೆದು ರಾಜ್ಯಕ್ಕೆ 7 ನೇಯರ್ಯಾಂಕ್ ಹಾಗೂ ಪಿ. ನಂದನ್ ಹೆಬ್ಬಾರ್ ಇವರು 591 ಅಂಕಗಳನ್ನು ಪಡೆದು ರಾಜ್ಯಕ್ಕೆ 8 ನೇ ರ್ಯಾಂಕ್ ಪಡೆದಿರುತ್ತಾರೆ.
ವಾಣಿಜ್ಯ ವಿಭಾಗದ ಶಮಿತ್ ವಿ.ಕೆ. ಇವರು 595 ಅಂಕಗಳನ್ನು ಪಡೆದು ರಾಜ್ಯಕ್ಕೆ 3ನೇ ರ್ಯಾಂಕ್ ಹಾಗೂ ಪ್ರಜ್ವಲ್ ಕೆ.ಎನ್. 594 ಅಂಕಗಳೊಂದಿಗೆ 4ನೇ ರ್ಯಾಂಕ್ ಪಡೆದಿರುತ್ತಾರೆ.
ಕಲಾ ವಿಭಾಗದಲ್ಲಿ ಮನು ಭಟ್, ಇವರು 584 ಅಂಕಗಳನ್ನು ಪಡೆದು ಕಾಲೇಜಿನಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಸಂಸ್ಕೃತದಲ್ಲಿ 6 ಮಂದಿ, ಭೌತಶಾಸ್ತ್ರದಲ್ಲಿ 1, ರಸಾಯನಶಾಸ್ತ್ರ 6, ಗಣಿತ 5, ಜೀವಶಾಸ್ತ್ರ 17, ಮೂಲಗಣಿತ 3, ಲೆಕ್ಕಶಾಸ್ತ್ರ 5, ವ್ಯವಹಾರ ಅಧ್ಯಯನ 1, ಅರ್ಥಶಾಸ್ತ್ರ 3 ಮತ್ತು ಸಂಖ್ಯಾಶಾಸ್ತ್ರ 6 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆದು ಸಾಧನೆ ಮಾಡಿರುತ್ತಾರೆ.




