May 6, 2026

ಕಾರವಾರ: ಯುವತಿಗೆ ಚಾಕುವಿನಿಂದ ಇರಿತ, ಆಟೋ ಚಾಲಕನ ಬಂಧನ

0
image_editor_output_image-1285518781-1712015285232.jpg

ಕಾರವಾರ: ನಗರದ ಯುವತಿಗೆ ಚಾಕು ಇರಿದಿದ್ದ ಆಟೋ ಚಾಲಕನನ್ನು‌ ಪೊಲೀಸರು‌ ಬಂಧಿಸಿದ್ದಾರೆ.

ರವಿ (42) ಎಂಬಾತ ಆಟೋ‌ಚಾಲಕ. ಆರೋಪಿಯನ್ನು ನಗರ ಠಾಣೆಯ ಪೊಲೀಸರು ನ್ಯಾಯಾಲಯದ ಎದುರು ಹಾಜರುಪಡಿಸಿದರು. ನ್ಯಾಯಾಧೀಶರು ಆರೋಪಿ ರವಿಯನ್ನು ನ್ಯಾಯಾಂಗ ಬಂಧನದಲ್ಲಿಡುವಂತೆ ಆದೇಶ ನೀಡಿದ್ದು, ಆತನನ್ನು ಇಂದು ಜೈಲಿಗೆ ಕಳುಹಿಸಲಾಗಿದೆ.

ನಗರದಲ್ಲಿ ರವಿವಾರ ರಾತ್ರಿ ಯುವತಿಯೋರ್ವಳಿಗೆ ಆಟೋ‌ಚಾಲಕ ರವಿ ಯಾನೆ ರವಿ ಶಂಕರ್ ಯಾನೆ ಕಟ್ಟಪ್ಪ ಚಾಕುವಿನಿಂದ ಇರಿದಿದ್ದ. ತಕ್ಷಣ ಆಕೆಯನ್ನು ‌ಮೆಡಿಕಲ್ ಕಾಲೇಜಿಗೆ ಸೇರಿಸಿದ್ದ ರಿಂದ ಅಪಾಯದಿಂದ ಪಾರಾಗಿದ್ದಾಳೆ ಎನ್ನಲಾಗಿದೆ. ಐಸಿಯು ನಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!