September 25, 2026

ಯುವತಿ ಕಾರನ್ನು ಚೇಸ್ ಮಾಡಿ ಪುಂಡಾಟ: ಇಬ್ಬರ ಬಂಧನ

0
image_editor_output_image1746306029-1712015783031.jpg

ಬೆಂಗಳೂರು: ಯುವತಿ ಕಾರನ್ನು ಚೇಸ್ ಮಾಡಿದ ಮೂವರು ಯುವಕರು ಪುಂಡಾಟ ಮೆರೆದ ಘಟನೆ ಬೆಂಗಳೂರಿನ ಕೋರಮಂಗದಲ್ಲಿ ರಾತ್ರಿ ನಡೆದಿದೆ.

ತೇಜಸ್, ಜಗನ್ನಾಥ ಬಂಧಿತ ಆರೋಪಿಗಳಾಗಿದ್ದು ಮತ್ತೊಬ್ಬನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

 

ಮಡಿವಾಳ ಸಿಗ್ನಲ್‌ನಲ್ಲಿ ದ್ವಿಚಕ್ರ ವಾಹನದಲ್ಲಿದ್ದ ಮೂವರು ಯುವಕರಿಗೆ ಮತ್ತು ಕಾರಿನಲ್ಲಿದ್ದ ಯುವತಿಗೆ ಕಿರಿಕ್ ನಡೆದಿದೆ. ನಂತರ ಕಾರನ್ನು ಚೇಸ್ ಮಾಡಿದ ಮೂವರು ಕಿರುಕುಳ ನೀಡಿದ್ದಾರೆ.

ಯುವಕರು ಕಾರು ಫಾಲೋ ಮಾಡುವ ದೃಶ್ಯ ಮೊಬೈಲಿನಲ್ಲಿ ರೆಕಾರ್ಡ್ ಮಾಡಿದ ಯುವತಿ ಆಳುತ್ತಲೇ 112ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಡಿವಾಳ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶೋಧ ಕಾರ್ಯ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!