ಬಂಟ್ವಾಳ: ಗುಡ್ಡಕ್ಕೆ ಆಕಸ್ಮಿಕ ಬೆಂಕಿ
ಬಂಟ್ವಾಳ: ಮಂಚಿ ಎಂಬಲ್ಲಿ ಗುಡ್ಡವೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಬಂಟ್ವಾಳ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದ್ದಾರೆ.
ಗುಡ್ಡದ ಸಮೀಪದಲ್ಲಿ ರಬ್ಬರ್ ತೋಟ ಇದ್ದು, ಬೆಂಕಿಯ ತೀವ್ರತೆಗೆ ರಬ್ಬರ್ ಕೃಷಿ ನಾಶವಾಗುವ ಸಾಧ್ಯತೆಗಳಿವೆ ಎಂದು ತೋಟದ ಮಾಲಕ ಅಗ್ನಿ ಶಾಮಕದಳದ ಕಚೇರಿಗೆ ಮಾಹಿತಿ ನೀಡಿದ್ದರು. ಗುಡ್ಡದ ಮೇಲೆ ಕಾಣಿಸಿಕೊಂಡ ಬೆಂಕಿ ಯಾವುದೇ ಅಪಾಯವನ್ನು ಮಾಡಬಾರದು ಎಂಬ ದೃಷ್ಟಿಯಿಂದ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದ್ದಾರೆ.





