March 22, 2026

ಬೆಳ್ತಂಗಡಿ: ನಿಷೇಧಿತ ಹೋಮ್ ಮೇಡ್ ವೈನ್ ಮಾರಾಟ ಮಾಡುತ್ತಿದ್ದ ಅಡ್ಡೆಗೆ ಅಧಿಕಾರಿಗಳ ದಾಳಿ

0
IMG-20240322-WA0001.jpg

ಬೆಳ್ತಂಗಡಿ: ನಿಷೇಧಿತ ಹೋಮ್ ಮೇಡ್ ವೈನ್ ಮಾರಾಟ ಮಾಡುತ್ತಿದ್ದ ಅಡ್ಡೆ ಮೇಲೆ ಬೆಳ್ತಂಗಡಿ ಅಬಕಾರಿ ದಳದದವರು ಭರ್ಜರಿ ಭೇಟಿಯಾಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದ ಜಿತೇಂದ್ರ ಜೈನ್ ಎಂಬವರ ಮಾಲೀಕತ್ವದ ವರ್ಧಮಾನ್ ಸ್ಟೋರ್ ನಲ್ಲಿ ನಿಷೇಧಿತ ಹೋಮ್ ಮೇಡ್ ವೈನ್ ನನ್ನು ಹೊರ ಜಿಲ್ಲೆಯಿಂದ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ದಾಸ್ತಾನು ಮಾಡಿ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಬೆಳ್ತಂಗಡಿ ಅಬಕಾರಿ ದಳದ ಇನ್ಸ್ಪೆಕ್ಟರ್ ಲಕ್ಷ್ಮಣ್ ಉಪ್ಪಾರ್ ಮತ್ತು ತಂಡ ಮಾ.20 ರಂದು ಸಂಜೆ 4 ಗಂಟೆಗೆ ದಾಳಿ ಮಾಡಿದ್ದಾರೆ.

ದಾಳಿ ವೇಳೆ ಮಾರಾಟ ಮಾಡಲು ದಾಸ್ತಾನು ಮಾಡಿದ್ದ ನಿಷೇಧಿತ ಹೋಮ್ ಮೇಡ್ ವೈನ್ 306 ಲೀಟರ್ ವಶಪಡಿಸಿಕೊಂಡಿದ್ದು. ಇದರ ಮೌಲ್ಯ ಸುಮಾರು 2,01,960 ಲಕ್ಷ ರೂಪಾಯಿ ಅಗಿದ್ದು.‌ ಆರೋಪಿ ನಿಡ್ಲೆ ಗ್ರಾಮದ ರವಿರಾಜ್ ಜೈನ್ ಮಗ ಜಿತೇಂದ್ರ ಜೈನ್ (46) ಎಂಬಾತನನ್ನು ಬಂಧಿಸಿ ಆತನ ವಿರುದ್ಧ ಬೆಳ್ತಂಗಡಿ ಅಬಕಾರಿ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!