ಕಾಸರಗೋಡು: ಜ್ಯೋತಿಷ್ ಸಾವಿಗೆ ನ್ಯಾಯ ಸಿಗುವವರೆಗೂ ಸಭೆ ನಡೆಯಲು ಬೀಡುವುದಿಲ್ಲ ಎಂದ ಬಿಜೆಪಿ ಕಾರ್ಯಕರ್ತರು
ಕಾಸರಗೋಡು: ಕಾಸರಗೋಡಿನ ಜ್ಯೋತಿಷ್ ಸಾವಿಗೆ ನ್ಯಾಯ ಸಿಗೋವರೆಗೆ ಬಿಜೆಪಿ ಸಭೆ ನಡೆಯಲು ಬೀಡುವುದಿಲ್ಲ ಎಂದು ಜೋತ್ಯಿಷ್ ಬೆಂಬಲಿಗರು ಮಂಜೇಶ್ವರದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಮಂಜೇಶ್ವರದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆಯುತ್ತಿದ್ದ ಸಭಾಂಗಣಕ್ಕೆ ನುಗ್ಗಿದ ಜ್ಯೋತಿಷ್ ಬೆಂಬಲಿಗರು, ಹಿಂದೂ ನಾಯಕ ಜ್ಯೋತಿಷ್ ಸಾವಿಗೆ ನ್ಯಾಯ ಸಿಗೋವರೆಗೂ ಬಿಜೆಪಿ ಸಭೆ ನಡೆಯಲು ಬಿಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜ್ಯೋತಿಷ್ ಸಾವಿಗೆ ನ್ಯಾಯ ಕೊಡಿಸುತ್ತೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರವೀಶ್ ತಂತ್ರಿ ಹೇಳಿದ್ದರು. ಆದರೆ ಜ್ಯೋತಿಷ್ ಸಾವಿನ ವಿಚಾರದಲ್ಲಿ ಒಂದು ತೀರ್ಮಾನ ಕೈಗೊಳ್ಳಲ್ಲದೇ ಬಿಜೆಪಿಯ ಯಾವ ಸಭೆಯನ್ನ ನಡೆಯಲು ಬಿಡೋದಿಲ್ಲ ಎಂದು ಕಾರ್ಯಕರ್ತರು ಹಠ ಹಿಡಿದರು.





