ಪ್ರೀತಿಸಲು ಯುವತಿ ನಿರಾಕರಣೆ: ಮನನೊಂದು ಯುವಕ ಆತ್ಮಹತ್ಯೆ
ಆನೇಕಲ್: ಪ್ರೀತಿಸಲು ಯುವತಿ ನಿರಾಕರಿಸಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹುಲಿಮಂಗಲ ಸಮೀಪದ ನಂಜಾಪುರದಲ್ಲಿ ನಡೆದಿದೆ.
ಹರ್ಷಿತ್ ಮೃತ ಯುವಕ. ಮೃತ ಹರ್ಷಿತ್ ತುಮಕೂರು ಮೂಲದ ಮೃದುಲಾ ಅಲಿಯಾಸ್ ಮೇಘಾ ಪ್ರೀತಿಸುತ್ತಿದ್ದನು.
ಮೃದುಲಾ ಕೂಡ ಹರ್ಷಿತ್ನನ್ನು ಪ್ರೀತಿಸುತ್ತಿದ್ದಳು. ಇಬ್ಬರು ಕಳೆದ ಒಂದೂವರೆ ವರ್ಷದಿಂದ ಪ್ರೀತಿಸುತ್ತಿದ್ದರು.





