March 22, 2026

ಪುತ್ತೂರು: ಅಂಗನವಾಡಿ ಕೇಂದ್ರದ ಬೀಗ ಮುರಿದು ಅಮ್ಲೇಟ್ ಮಾಡಿ ತಿಂದುಹೋದ ಕಳ್ಳರು

0
image_editor_output_image-2069437178-1710838415686.jpg

ಪುತ್ತೂರು: ಅಂಗನವಾಡಿ ಕೇಂದ್ರದ ಬೀಗ ಮುರಿದು ಒಳನುಗ್ಗಿದ ಕಿಡಿಗೇಡಿಗಳು ಪುಟಾಣಿಗಳಿಗೆಂದು ಇಡಲಾಗಿದ್ದ ಕೋಳಿ ಮೊಟ್ಟೆಗಳನ್ನು ಅಮ್ಲೇಟ್ ಮಾಡಿ ತಿಂದು ತೆರಳಿರುವ ಘಟನೆ ಮಾ. 18ರಂದು ಬೆಳಕಿಗೆ ಬಂದಿದೆ.

ನೆಲ್ಲಿಕಟ್ಟೆಯ ಶ್ರೀ ರಾಮಕೃಷ್ಣ ಸಮಾಜ ಸೇವಾ ಸಂಸ್ಥೆಯ ಬಳಿಯ ಅಂಗನವಾಡಿ ಕೇಂದ್ರಕ್ಕೆ ಬೆಳಿಗ್ಗೆ ಅಂಗನವಾಡಿ ಕಾರ್ಯಕರ್ತೆ ಬಂದಾಗ ಕೇಂದ್ರದ ಬಾಗಿಲ ಬೀಗ ಒಡೆದಿತ್ತು.

ಒಳಗೆ ನೋಡಿದಾಗ ಅಡುಗೆ ಕೋಣೆಯಲ್ಲಿ ಪುಟಾಣಿಗಳಿಗೆಂದು ದಾಸ್ತಾನಿರಿಸಲಾಗಿದ್ದ ಮೊಟ್ಟೆಗಳು ಒಡೆದಿದ್ದು, ಪಕ್ಕದಲ್ಲಿರುವ ಗ್ಯಾಸ್ ಸ್ಟವ್ ನ ಬಾನಲೆಯಲ್ಲಿ ಅಮ್ಮೆಟ್ ತುಂಡು ಇರುವುದು ಕಂಡುಬಂದಿದೆ. ಯಾರೋ ಕಿಡಿಗೇಡಿಗಳು ರಾತ್ರಿ ವೇಳೆ ಅಂಗನವಾಡಿಗೆ ನುಗ್ಗಿ ಅಮ್ಮೆಟ್ ಮಾಡಿ ತಿಂದು ಹೋಗಿದ್ದಾರೆ. ಘಟನೆ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ.

Leave a Reply

Your email address will not be published. Required fields are marked *

error: Content is protected !!