ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಅಬೂಬಕರ್ ಅನಿಲಕಟ್ಟೆ ಆಯ್ಕೆ.
ವಿಟ್ಲ: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಲೇಖಕ, ಸಾಹಿತಿ ಅಬೂಬಕರ್ ಅನಿಲಕಟ್ಟೆ ಇವರನ್ನು ಯು.ಟಿ.ಖಾದರ್ ರವರ ಶಿಫಾರಸಿನ ಮೇರೆಗೆ ರಾಜ್ಯ ಸರಕಾರ ನೇಮಕ ಮಾಡಿದೆ.
ಕಳೆದ ಇಪ್ಪತ್ತೈದು ವರ್ಷಗಳಿಂದ ಕರ್ನಾಟಕದ ವಿವಿಧ ಪತ್ರಿಕೆಗಳಿಗೆ ನಿರಂತರ ಲೇಖನಗಳನ್ನು ಬರೆಯುತ್ತಿರುವ ಅಬೂಬಕರ್ ,ಮಂಗಳ ಸಾಹಿತ್ಯ ವೇದಿಕೆಯ ಜಿಲ್ಕಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು,ಕರ್ನಾಟಕ ಭಾವೈಕ್ಯತಾ ಪರಿಷತ್ತಿನ ದ.ಕ.ಜಿಲ್ಲಾ ಉಪಾಧ್ಯಕ್ಷ ರಾಗಿದ್ದಾರೆ.ಕನ್ನಡ ಹಾಗೂ ಬ್ಯಾರಿ ಭಾಷೆಯಲ್ಲಿ ವಿವಿಧ ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡುತ್ತಿದ್ದಾರೆ..



