ವಿಟ್ಲ: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಚಂದಳಿಕೆ ಗೀತಾ ದಾಮೋದರ ಪೂಜಾರಿ: ವಿಟ್ಲ ಶೋಕಮಾತೆ ಇಗರ್ಜಿ ಮತ್ತು ಕಥೋಲಿಕ್ ಸಭಾ ವತಿಯಿಂದ 1 ಲಕ್ಷ ರೂ. ಧನ ಸಹಾಯ
ವಿಟ್ಲ: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ವಿಟ್ಲದ ಚಂದಳಿಕೆ ನಿವಾಸಿ ದಾಮೋದರ ಪೂಜಾರಿ ಅವರ ಪತ್ನಿ ಗೀತಾ ಅವರಿಗೆ ವಿಟ್ಲ ಶೋಕ ಮಾತಾ ಇಗರ್ಜಿ ಹಾಗೂ ಕಥೋಲಿಕ್ ಸಭಾ ವಿಟ್ಲ ಘಟಕ ವತಿಯಿಂದ 106000 ಸಾವಿರ ರೂ. ಧನ ಸಹಾಯ ನೀಡಲಾಯಿತು.
ವಿಟ್ಲ ಶೋಕಮಾತೆಯ ಧರ್ಮಗುರು
ಐವನ್ ಮೈಕಲ್ ರೋಡ್ರಿಗಸ್ ಅವರು ಧನ ಸಹಾಯ ವಿತರಿಸಿದರು.
ಈ ಸಂದರ್ಭ ಕಥೋಲಿಕ್ ಸಭಾದ ವಲಯಾಧ್ಯಕ್ಷ ಆ್ಯಂಟನಿ ಡಿ ಸೋಜ ಮೊಗರ್ನಾಡ್, ನ್ಯಾಯವಾದಿ ಜಯರಾಮ ರೈ, ಡಿ ಗ್ರೂಪ್ ಪ್ರಧಾನ ಕಾರ್ಯದರ್ಶಿ ಶಾಕೀರ್ ಅಳಕೆಮಜಲು, ವಿಟ್ಲ ಶೋಕಾ ಮಾತೆಯ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ವಿಜಯ ಪಾಯಸ್, ಕಾರ್ಯದರ್ಶಿ ಥೋಮಸ್ ಮಸ್ಕರೇಂಞಸ್, ಆಯೋಗಗಳ ಸಂಚಾಲಕ ಲೂಯಿಸ್ ಮಸ್ಕರೇಂಞಸ್ ವಿಟ್ಲ, ಕಥೋಲಿಕ್ ಸಭಾ ವಿಟ್ಲ ಘಟಕ ಅಧ್ಯಕ್ಷೆ ಜೆಸಿಂತ ಲಸ್ರಾದೊ, ಮನೋಹರ ಲ್ಯಾನ್ಸಿ ಡಿ ಸೋಜ,
ವಿಟ್ಲ ಸಂತ ಪಾವ್ಲ್ ಧರ್ಮದ ಭಗಿನಿಯರಾದ ಸಿಸ್ಟರ್ ಮರೀನಾ, ಸಿಸ್ಟರ್ ಜಾನೇಟ್, ಸಮಾಜ ಸೇವಕ ದಿವಾಕರ, ಕಥೋಲಿಕ್ ಸಭಾ ಸಂಘಟನೆ ಸದಸ್ಯರು, ಸಂತ ಅಂತೋನಿ ವಾರ್ಡ್ ಲೀಡರ್ ತೆರೆಸಾ ಡಿ ಸೋಜ, ಉಬೈದ್ ವಿಟ್ಲ ಬಝಾರ್, ಕ್ರೈಸ್ತ ಬಾಂಧವರು ಉಪಸ್ಥಿತರಿದ್ದರು.





