ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ: ಶರಣ್ ಪಂಪ್ವೆಲ್ ನನ್ನು ಬಂಧಿಸಿ ತನಿಖೆಗೆ ಒಳಪಡಿಸಿದರೆ ಸತ್ಯಾಂಶ ಹೊರಬರಹುದು: ಮುಸ್ಲಿಂ ಸಮಾಜ ಬಂಟ್ವಾಳ
ಬಂಟ್ವಾಳ: ಭಯೋತ್ಪಾದಕ ಹಿನ್ನಲೆಯಿರುವ ಶರಣ್ ಪಂಪ್ವೆಲ್ ನನ್ನು ಜೈಲುಗಟ್ಟಿದರೆ ರಾಮೇಶ್ವರ ಕೆಫೆ ಬಾಂಬ್ ಮತ್ತು ಈ ಹಿಂದೆ ನಡೆದ ಎಲ್ಲಾ ಭಯೋತ್ಪದನಾ ಕೃತ್ಯ ಬಯಲಾಗುತ್ತದೆ ಎಂದು ಮುಸ್ಲಿಂ ಸಮಾಜ ಬಂಟ್ವಾಳ ಆರೋಪಿಸಿದೆ.
ಮಂಗಳೂರಿನಲ್ಲಿ ಈ ಹಿಂದೆ ನಡೆದ ಫಾಝಿಲ್ ಕೊಲೆಯನ್ನು ನಾನೇ ಮಾಡಿಸಿದ್ದು ಎಂದು ಬಹಿರಂಗವಾಗಿ ಹೇಳಿಕೆ ನೀಡಿದರು. ಈತನ ವಿರುದ್ಧ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಮತ್ತೆ ತನ್ನ ಚಾಲಿಯನ್ನು ಮುಂದುವರಿಸಿದ್ದು, ಇದೀಗ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಪೋಟವನ್ನು ಕೂಲಂಕುಷವಾಗಿ ತನಿಖೆ ನಡೆಸಿದ್ದಲ್ಲಿ ಇದರ ಹಿಂದೆ ಶರಣ್ ಪಂಪ್ವೆಲ್ ಕೈವಾಡವಿರುವ ಶಂಕೆಯಿದೆ ಎಂದು ಮುಸ್ಲಿಂ ಸಮಾಜ ಬಂಟ್ವಾಳ ಇದರ ಅಧ್ಯಕ್ಷರಾದ ಕೆ.ಎಚ್ ಅಬುಬಕ್ಕರ್ ಆರೋಪವನ್ನು ಮಾಡಿದ್ದಾರೆ.
ರಾಮೇಶ್ವರ ಕೆಫೆಯಲ್ಲಿ ನಡೆದ ಬಾಂಬ್ ಸ್ಪೋಟಿಸಿದ ಪ್ರಕರಣವನ್ನು ಭೇದಿಸುತ್ತಿರುವ NIA ತಂಡವು ಯಾವುದೇ ಒತ್ತಡಕ್ಕೆ ಮಣಿಯದೆ ಕಾರ್ಯಾಚರಣೆ ನಡೆಸಿದರೆ ಕಂಬಿಯೆನಿಸುವ ಎಲ್ಲಾ ಸಾದ್ಯತೆಯಿದೆ. ಚುನಾವಣೆ ಸನಿಹದಲ್ಲಿರುವಾಗ ಬಿಜೆಪಿ ಮತ್ತು ಸಂಘ ಪರಿವಾರ ದೇಶಾದ್ಯಂತ ಭಯೋತ್ಪಾದನಾ ಕ್ರತ್ಯ ನಡೆಸುವುದು ಜಗಜ್ಜಾಹಿರವಾಗಿದೆ.
ಈ ಹಿನ್ನಲೆಯಲ್ಲಿ ಪ್ರಕರಣವನ್ನು ತಿರುಚಲು ಶರಣ್ ಪಂಪ್ವೆಲ್ ಮದರಸ ಮತ್ತು ಮಸೀದಿಯ ವಿರುದ್ಧ ಹೇಳಿಕೆಯನ್ನು ನೀಡಿರುತ್ತಾನೆ. ಈ ರೀತಿಯ ಹೇಳಿಕೆಯನ್ನು ಬಂಟ್ವಾಳ ಮುಸ್ಲಿಂ ಸಮಾಜವು ತೀವ್ರವಾಗಿ ಖಂಡಿಸುತ್ತದೆ ಮತ್ತು ಈ ರೀತಿ ವಿದ್ವೇಷವನ್ನುಂಟು ಮಾಡುವ ಹೇಳಿಕೆಯನ್ನು ನೀಡಿದ ಶರಣ್ ಪಂಪ್ವೆಲ್ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಸರಕಾರ ವನ್ನು ಪತ್ರಿಕಾ ಪ್ರಕಟಣೆ ಮೂಲಕ ಒತ್ತಾಯಪಡಿಸುತ್ತಿದ್ದೇವೆ. ಎಂದು ಮುಸ್ಲಿಂ ಸಮಾಜ ಬಂಟ್ವಾಳ ಅದ್ಯಕ್ಷ ಕೆ.ಎಚ್. ಅಬುಬಕ್ಕರ್ ಹೇಳಿಕೆ ನೀಡಿರುನತ್ತಾರೆ.





