ವಿಟ್ಲ: ಕಾರು ಮತ್ತು ದ್ವಿಚಕ್ರ ನಡುವೆ ಅಪಘಾತ: ಸುಳ್ಯದ ಮೂವರು ಮಹಿಳೆಯರು ಸಹಿತ ಆರು ಮಂದಿಗೆ ಗಾಯ
ವಿಟ್ಲ: ಕಾರು ಮತ್ತು ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಎರಡು ವಾಹನಗಳಲ್ಲಿದ್ದ ಒಟ್ಟು ಆರು ಮಂದಿ ಗಾಯಗೊಂಡ ಘಟನೆ ಮಾಣಿ-ಕೊಡಾಜೆ ಗಡಿಭಾಗದಲ್ಲಿ ನಡೆದಿದೆ.
ಮಂಗಳೂರು ಕಡೆಯಿಂದ ಸುಳ್ಯ ಕಡೆಗೆ ತೆರಳುತ್ತಿದ್ದ ಕಾರು ಎದುರಿನಿಂದ ಬರುತ್ತಿದ್ದ ಆಕ್ಟೀವಾ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಿಂದ ಆಕ್ಟೀವಾ ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಗಾಯಗೊಂಡವರನ್ನು ಎರಡು ಆಂಬ್ಯುಲೆನ್ಸ್ ಮೂಲಕ ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗಾಯಗೊಂಡವರನ್ನು ಜಾಲ್ಸೂರು ದೇಲಂಪಾಡಿ ವಿದ್ಯಾ(20), ಚೈತ್ರಾ(23) ಎಂದು ಗುರುತಿಸಲಾಗಿದ್ದು, ಮತ್ತೊಬ್ಬ ಮಹಿಳೆಯ ವಿವರ ತಿಳಿದು ಬಂದಿಲ್ಲ. ಕಾರಿನ ಚಾಲಕ ಬಂಟ್ವಾಳ ಮೂಲದವರಾಗಿದ್ದು, ಆತನಿಗೂ ಗಾಯವಾಗಿದೆ. ದ್ವಿಚಕ್ರ ವಾಹನದಲ್ಲಿದ್ದ ಇಬ್ಬರಿಗೆ ತೀವ್ರ ಸ್ವರೂಪದ ಗಾಯವಾಗಿದೆ.
ದೇಲಂಪಾಡಿಯ ಚೈತ್ರಾ ಎಂಬಾಕೆಗೆ ಸದ್ಯದಲ್ಲಿ ಮದುವೆ ಇದ್ದು, ಬಟ್ಟೆ ಖರೀದಿಸಲು ಮಂಗಳೂರಿಗೆ ಹೋಗಿ ಹಿಂತಿಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.





