ವಿಟ್ಲ: ಜೀಲಾನಿ ಯೂತ್ ಫೆಡರೇಶನ್ ಹೆಲ್ಪ್ ಲೈನ್ ಕಂಬಳಬೆಟ್ಟುವಿನ ಕಚೇರಿ ಉದ್ಘಾಟನೆ

ವಿಟ್ಲ: ಜೀಲಾನಿ ಯೂತ್ ಫೆಡರೇಶನ್ ಹೆಲ್ಪ್ ಲೈನ್ ಕಂಬಳಬೆಟ್ಟು ಇದರ ಕಚೇರಿಯನ್ನು ಉದ್ಘಾಟಿಸಲಾಯಿತು.


ಜನಪ್ರಿಯ ಫೌಂಡೇಶನ್ ಚೆಯರ್ಮ್ಯಾನ್ ವಿ.ಕೆ ಅಬ್ದುಲ್ ಬಶೀರ್ ಅವರು ನೂತನ ಕಚೇರಿ ಉದ್ಘಾಟಿಸಿ, ಮಾತನಾಡಿ ಯುವಕರು ಸಮಾಜ ಸೇವೆ ಕಾರ್ಯಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಂಡಾಗ ಸಮಾಜ ಅಭಿವೃದ್ಧಿ ಹೊಂದುತ್ತದೆ. ಬಡ ಜನರ ಸೇವೆಗಾಗಿ ಇಂತಹ ಸಂಸ್ಥೆಯನ್ನು ಸ್ಥಾಪಿಸಿದ ಯುವಕ ಕಾರ್ಯ ಶ್ಲಾಘನೀಯ ಎಂದರು.
ಮಸೀದಿ ಖತೀಬ್ ಇಬ್ರಾಹಿಂ ಮದನಿ ದುವಾಃ ನೆರವೇರಿಸಿದರು.
ಸಿ.ಎಚ್ ಮಹಮ್ಮದ್ ಹನೀಫ್ ಸಖಾಫಿ, ಅಬ್ದುಲ್ ರಹೀಮ್ ಸಖಾಫಿ, ಜೀಲಾನಿ ಯೂತ್ ಫೆಡರೇಶನ್ ಹೆಲ್ಪ್ ಲೈನ್ ಅಧ್ಯಕ್ಷ ಅಬ್ದುಲ್ ರಝಾಕ್ ಮೋನು, ಪ್ರಧಾನ ಕಾರ್ಯದರ್ಶಿ ಜಂಶಾದ್ ಎಂಜಿನಿಯರ್, ಕೋಶಾಧಿಕಾರಿ ಗಫೂರ್ ನೆಕ್ಕರೆ, ಪ್ರಮುಖರಾದ ಅಬ್ದುಲ್ ಖಾದರ್ ಹಾಜಿ ಬದ್ರಿಯಾ, ಅಬ್ದುಲ್ ಖಾದರ್ ಹಾಜಿ ಸುನ್ನಿ, ಅಬ್ದುಲ್ ರಝಾಕ್ ಬಾಂಬೆ, ಅಬೂಬಕ್ಕರ್ ನೆಕ್ಕರೆ, ಅಬ್ದುಲ್ ರಹಿಮಾನ್ ಅದ್ರು, ಶಾಕೀರ್ ಬದನಾಜೆ, ಫಹಾದ್ ಕಂಬಳಬೆಟ್ಟು ಮೊದಲಾದವರು ಭಾಗವಹಿಸಿದ್ದರು.
ಹಾರೀಸ್ ಮದನಿ ಸ್ವಾಗತಿಸಿದರು.