ಸ್ನೇಹಿತರಿಂದಲೇ ವಿದ್ಯಾರ್ಥಿಯ ಹತ್ಯೆ
ನೋಯ್ಡಾ: ಜಗಳ ತಾರಕಕ್ಕೇರಿ ಸ್ನೇಹಿತರೇ ವಿದ್ಯಾರ್ಥಿಯನ್ನು ಹತ್ಯೆ ಮಾಡಿ ಬಳಿಕ ಶವವನ್ನು ಹೊಲದಲ್ಲಿ ಹೂತುಹಾಕಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ.
ಕಾಲೇಜು ವಿದ್ಯಾರ್ಥಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ, ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಈ ಕೊಲೆಯಲ್ಲಿ ನಾಲ್ಕು ಮಂದಿ ಪಾತ್ರವಿದೆ ಎಂಬುದು ತಿಳಿದುಬಂದಿದೆ.
ನೋಯ್ಡಾ ಮೂಲದ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಮತ್ತು ಉದ್ಯಮಿಯ ಪುತ್ರ ಯಶ್ ಮಿತ್ತಲ್ ಸೋಮವಾರದಿಂದ ತನ್ನ ಹಾಸ್ಟೆಲ್‌ನಿಂದ ನಾಪತ್ತೆಯಾಗಿದ್ದ. ಆತನ ತಂದೆ ದೀಪಕ್ ಮಿತ್ತಲ್ಗೆ ಅವರ ಮಗನ ಬಿಡುಗಡೆ ಮಾಡಬೇಕೆಂದರೆ 6 ಕೋಟಿ ನೀಡುವಂತೆ ಮೆಸೇಜ್ ಬಂದಿತ್ತು ಹಾಗಾಗಿ ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರು ಕ್ಯಾಂಪಸ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿದಾಗ, ಫೋನ್‌ನಲ್ಲಿ ಮಾತನಾಡುವಾಗ ಯಶ್ ಸೋಮವಾರ ವಿಶ್ವವಿದ್ಯಾಲಯದಿಂದ ಹೊರಹೋಗುವುದು ಕಂಡುಬಂದಿದೆ.





