ದಪ್ಪ ಆಗಲಿ ಎಂದು ಔಷಧಿಯಲ್ಲಿ ವಿಷಬೆರೆಸಿ ಪತ್ನಿಯನ್ನೇ ಕೊಂದ ಪತಿ
ಬಳ್ಳಾರಿ: ಗಂಡನೇ ಹೆಂಡತಿಗೆ ಊಟದಲ್ಲಿ ವಿಷ ಹಾಕಿ ಕೊಲೆ ಮಾಡಿದ ಆರೋಪ ಬಳ್ಳಾರಿ ನಗರದ ಕೌಲಬಜಾರ್ನಲ್ಲಿ ಕೇಳಿಬಂದಿದೆ.
ಹೆಂಡತಿ ದಪ್ಪ ಆಗಲಿ ಎಂದು ಔಷಧೀಯ ನೆಪದಲ್ಲಿ ಗಂಡ ಸಾಧಿಕ ಸಾಬ್ (25) ವಿಷ ಬೆರಸಿದ್ದಾನೆ ಈ ಕುರಿತು ಮೃತಳ ಪೋಷಕರು ಆರೋಪಿಸಿದ್ದಾರೆ. ಈ ಹಿನ್ನಲೆ ಮೂರು ದಿನಗಳ ಕಾಲ ವಿಮ್ಸ್ ಆಸ್ಪತ್ರೆಯಲ್ಲಿ ಮೃತ ಫರ್ಜಾನಾಭಿ (22) ಚಿಕಿತ್ಸೆಗೆ ದಾಖಲಾಗಿದ್ದರು. ಇಂದು(ಫೆ.28) ಚಿಕಿತ್ಸೆ ಫಲಿಸದೆ ಫರ್ಜಾನಾಭಿ ಮೃತರಾಗಿದ್ದಾರೆ.
ಈ ಕುರಿತು ಮೃತಳ ಪೋಷಕರು ಬಳ್ಳಾರಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.




