ಹೃದಯಾಘಾತದಿಂದ ಪತಿ ಸಾವು: ಆಘಾತಗೊಂಡು ಪತ್ನಿ ಆತ್ಮಹತ್ಯೆ
ನವದೆಹಲಿ: ದೆಹಲಿಯ ಮೃಗಾಲಯಕ್ಕೆ ಭೇಟಿ ನೀಡಿದ್ದ ಗಾಜಿಯಾಬಾದ್‌ನ ನವಜೋಡಿಯೊಂದು ದಾರುಣ ಅಂತ್ಯ ಕಂಡಿರುವ ಘಟನೆ ನಡೆದಿದೆ.
ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟರೆ, ಪತಿಯ ಸಾವಿನಿಂದ ಆಘಾತಗೊಂಡು ಪತ್ನಿ ಕೂಡ ಕಟ್ಟಡದಿಂದ ಜಿಗಿದು ಸಾವನ್ನಪ್ಪಿದ್ದಾಳೆ.
25 ರ ಹರೆಯದ ಅಭಿಷೇಕ್ ಅಹ್ಲುವಾಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇದಾದ 24 ಗಂಟೆಗಳ ಬಳಿಕ ಪತಿ ಸಾವಿನ ಆಘಾತದಿಂದ ಅಂಜಲಿ, ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.





