ಕಾರ್ಕಳ: ಕೆಇಬಿ ಬಳಿ ಬೈಕ್ ಸ್ಕಿಡ್: ಸವಾ ಸ್ಥಳದಲ್ಲೇ ಮೃತ್ಯು
ಕಾರ್ಕಳ : ದೂಪದಕಟ್ಟೆ ಸಮೀಪ ಪರ್ಪಲೆ ಕೆಇಬಿ ಬಳಿ ಬೈಕೊಂದು ಸ್ಕಿಡ್ ಆಗಿ ಓರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಫೆ. 22ರಂದು ಸಂಭವಿಸಿದೆ.
ಬೈಕ್ ಸ್ಕಿಡ್ ಆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೋರ್ವ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಿಬ್ಬರು ನಿಟ್ಟೆ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಎನ್ನಲಾಗುತ್ತಿದೆ. ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.