ಕಲ್ಲಡ್ಕ: ಅನುಗ್ರಹ ಮಹಿಳಾ ಕಾಲೇಜಿನಲ್ಲಿ ‘ಶಿಕ್ಷಣ ಮತ್ತು ವೈವಾಹಿಕ ಜೀವನದ ಸಮತೋಲನ’ ವಿಷಯದ ಕುರಿತು ಸಮಾಲೋಚನಾ ಕಾರ್ಯಕ್ರಮ
ಕಲ್ಲಡ್ಕ: ಅನುಗ್ರಹ ಮಹಿಳಾ ಕಾಲೇಜು, ಕಲ್ಲಡ್ಕದಲ್ಲಿ “ಶಿಕ್ಷಣ ಮತ್ತು ವೈವಾಹಿಕ ಜೀವನದ ಸಮತೋಲನ” ಎಂಬ ವಿಷಯದ ಕುರಿತು ಸಮಾಲೋಚನಾ ಕಾರ್ಯಕ್ರಮ ನಡೆಸಲಾಯಿತು.
ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದಂತಹ
ಅನುಪಮ ಮಹಿಳಾ ಮಾಸಿಕದ ಸಂಪಾದಕಿ ಮತ್ತು ಬರಹಗಾರ್ತಿ ಶ್ರೀಮತಿ ಶಹನಾಝ್ ಎಮ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗದ ಸಂಚಾಲಕಿ ಹಾಗೂ ಫಾರ್ವರ್ಡ್ ಕೌನ್ಸಿಲ್ ಇದರ ಟ್ರಸ್ಟಿ ಆಗಿರುವಂತಹ ಶ್ರೀಮತಿ ಸಾಜಿದ ಮುಮಿನ್ ಹೆಣ್ಣು ಮಕ್ಕಳು ಯಾವುದೇ ಸಂದರ್ಭದಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಬಾರದು. ಅಂತೆಯೇ ಕುಟುಂಬದಲ್ಲಿ ಬರುವ ಕೆಡುಕುಗಳನ್ನು ಒಳಿತಿನಿಂದ ನಿವಾರಿಸಬೇಕು ಎಂದು ಹೇಳಿದರು.
ಕಾಲೇಜಿನ ಆಡಳಿತ ಮಂಡಳಿಯ
ಅಧ್ಯಕ್ಷರಾದ ಶ್ರೀಯುತ ಯಾಸೀನ್ ಬೇಗ್ ಇವರು ಅಧ್ಯಕ್ಷೀಯ ಭಾಷಣದಲ್ಲಿ ವಿದ್ಯಾರ್ಥಿನಿಯರನ್ನು ಪ್ರೇರೇಪಿಸುತ್ತಾ ವಿದ್ಯಾರ್ಥಿನಿಯರು ಸಮಾಜದ ಸಂಪತ್ತು ,ಆದ್ದರಿಂದ ಅವರನ್ನು ಉತ್ತಮ ಶಿಕ್ಷಣ ನೀಡಿ ಸರ್ವಗುಣ ಸಂಪನ್ನರಾಗಿ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಖಜಾಂಚಿ ಆದಂತಹ ಶ್ರೀಯುತ ಹೈದರ್ ಅಲಿ, ಕಾಲೇಜಿನ ಪ್ರಾಂಶುಪಾಲೆಯಾದ ಶ್ರೀಮತಿ ಹೇಮಲತ ಬಿ.ಡಿ, ಕಾಲೇಜಿನ ಸಲಹಾ ಸಮಿತಿಯ ಕಾರ್ಯದರ್ಶಿಯಾದ ಶ್ರೀಮತಿ ಮಮಿತಾ ಎಸ್ ರೈ, ಕಾಲೇಜಿನ ಬೋಧಕ- ಬೋಧಕೇತರ ವೃಂದ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಕುಮಾರಿ ಸುಕೈ ಬಾ ( ಪ್ರಥಮ ಬಿಕಾಂ ) ಕಿರಾತ್ ಪಠಿಸಿದರು. ಶ್ರೀಮತಿ ನವ್ಯ ( ಉಪನ್ಯಾಸಕಿ ವಾಣಿಜ್ಯ ವಿಭಾಗ ) ಸ್ವಾಗತಿಸಿದರು. ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಕುಮಾರಿ ಮೆಹನಾಝ್ ಸರ್ ಝೀನ ವಂದಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.




