ಸಜಿಪ ನಡುವಿನಲ್ಲಿ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂನ ವತಿಯಿಂದ ಸಾರ್ವಜನಿಕ ರಕ್ತದಾನ ಶಿಬಿರ
ಬಂಟ್ವಾಳ: ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಪೋರಮ್ ಸಜೀಪ ನಡು ಹಾಗೂ ಯೇನಪೋಯ ಮೆಡಿಕಲ್ ಕಾಲೇಜ್ ಸಹಬಾಗಿತ್ವದಲ್ಲಿ ಸಜೀಪ ಉಸ್ತಾದ್ ಸ್ಮರಣಾರ್ಥದ ಅಂಗವಾಗಿ ರಕ್ತದಾನ ಶಿಬಿರ ಮತ್ತು ಸಾಧಕರಿಗೆ ಸನ್ಮಾನ ಸಜಿಪ ನಡುವಿನಲ್ಲಿ ನಡೆಯಿತು.
ಸಜೀಪ ನಡು ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂನ ಅಧ್ಯಕ್ಷರಾದ ನೌಶಾದ್ ಸಜೀಪ ಇವರ ಅದ್ಯಕ್ಷತೆಯಲ್ಲಿ ನಡೆಯಿತು .ಎಸ್.ವೈ.ಎಸ್.ಸಜಿಪ ನಡು ಇದರ ಅಧ್ಯಕ್ಷರಾದ ಅಬ್ಬಾಸ್ ಮುಸ್ಲಿಯಾರ್ ದುಅ ನೆರವೇರಿಸಿದರು. ಸಜೀಪ ನಡು ಪಾಪ್ಯುಲರ್ ಪ್ರಂಟ್ ಬ್ಲಡ್ ಡೋನರ್ಸ್ ಇದರ ಗೌರವಾಧ್ಯಕ್ಷರಾದ ಹಾಜಿ ಎಸ್.ಅಬ್ದುಲ್ ಖಾದರ್ ಹಾಗು ಪಾಪ್ಯುಲರ್ ಫ್ರಂಟ್ ಬ್ಲಡ್ ಡೊನರ್ಸ್ ರಾಜ್ಯ ಸಂಚಾಲಕರಾದ ಹರಾಝ್ ಕಲ್ಲಡ್ಕ ಉಪಸ್ಥಿತಿ ಇದ್ದರು.
ಮುಖ್ಯ ಅತಿಥಿಗಳಾಗಿ ರಹಿಮಾನ್ ಮಠ ಅಧ್ಯಕ್ಷರು ಪಾಪ್ಯುಲರ್ ಫ್ರಂಟ್ ಮೆಲ್ಕಾರ್ ವಲಯ, ಹಾಜಿ ಅಬ್ದುಲ್ ರಝಾಕ್ ಅಧ್ಯಕ್ಷರು ಕೇಂದ್ರ ಜುಮಾ ಮಸೀದಿ ಸಜೀಪ ನಾಸೀರ್ ಸಜೀಪ ಜಿಲ್ಲಾ ಸಮಿತಿ ಸದಸ್ಯರು ಎಸ್.ಡಿ.ಪಿ.ಐ. ದ.ಕ.ಜಿಲ್ಲೆ, ಪೌಝಿಯಾ ಬಾನು ಅಧ್ಯಕ್ಷರು ಸಜಿಪ ನಡು ಪಂಚಾಯತ್, ಎಸ್.ಎನ್.ಇಕ್ಬಾಲ್ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಸಜೀಪ ನಡು, ಅಬ್ದುಲ್ ಗಪೂರ್ ಉಪಾಧ್ಯಕ್ಷರು ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಸಜೀಪ ನಡು ಭಾಗವಹಿಸಿದರು.



ಜನಾಬ್ ಅಹ್ಮದ್ ಬಾವ ಮತ್ತು ಯೂಸುಫ್ ಸಜೀಪರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ರಕ್ತದಾನಿಗಳಿಂದ 108 ಯುನಿಟ್ ರಕ್ತ ಸಂಗ್ರಹವಾಗಿದೆ.
ತಾಹಿದ್ ಸಜೀಪ ಸ್ವಾಗತಿಸಿ ಧನ್ಯವಾದ ನೆರವೇರಿಸಿದರು.





