ಉಪ್ಪಿನಂಗಡಿ: ಐದು ಮುಸ್ಲಿಂ ಯುವಕರ ಮೇಲೆ ತಲವಾರ್ ದಾಳಿ
ಪುತ್ತೂರು: ಐದು ಮಂದಿ ಮುಸ್ಲಿಂ ಯುವಕರ ಮೇಲೆ ತಲವಾರು ದಾಳಿ ನಡೆಸಿದ ಘಟನೆ ಉಪ್ಪಿನಂಗಡಿ ಬಳಿಯ ಇಳಂತಿಲ ಎಂಬಲ್ಲಿ ನಡೆದಿದೆ.
ತಲವಾರು ದಾಳಿಗೊಳಗಾಗಿ ಗಾಯಗೊಂಡ ಐದು ಮಂದಿ ಯುವಕರನ್ನು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆಂದು ತಿಳಿದು ಬಂದಿದೆ.
ಗಾಯಗೊಂಡ ಯುವಕರನ್ನು ಝಕರಿಯಾ ಇಳಂತಿಲ, ಸಿದ್ದೀಕ್, ಅಯ್ಯೂಬ್, ಫಯಾಝ್ ಮತ್ತು ಹಫೀಜ್ ಎಂದು ಗುರುತಿಸಲಾಗಿದೆ.
ಜಯರಾಮ್ ಮತ್ತಾತನ ತಂಡ ಈ ತಲವಾರು ದಾಳಿ ನಡೆಸಿದ್ದು ಎನ್ನಲಾಗಿದೆ. ಈ ಹಿಂದೆ ಕೂಡಾ ಈ ಪ್ರದೇಶದಲ್ಲಿ ತಲವಾರು ಝಳಪಿಸಿದ್ದ ಆರೋಪ ಈತನ ವಿರುದ್ಧ ಕೇಳಿ ಬಂದಿದೆ. ಇಳಂತಿಲ ಪ್ರದೇಶದಲ್ಲಿ ಇದ್ದ ಹಫೀಜ್ ಮತ್ತು ಫಯಾಝ್ ಮೇಲೆ ಮೊದಲು ದಾಳಿ ನಡೆಸಿದ್ದ ತಂಡ, ಇವರಿಬ್ಬರು ತಪ್ಪಿಸಿಕೊಂಡ ಬಳಿಕ ಝಕರಿಯಾ, ಸಿದ್ದೀಕ್ ಮತ್ತು ಅಯ್ಯೂಬ್ ಎಂಬ ಮೂವರು ಯುವಕರ ಮೇಲೆ ಮತ್ತೆ ತಲವಾರು ದಾಳಿ ನಡೆಸಿತು ಎನ್ನಲಾಗಿದೆ. ಝಕಾರಿಯಾ, ಸಿದ್ದೀಕ್ ಮತ್ತು ಅಯ್ಯೂಬ್ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.






