March 21, 2026

ಪುತ್ತೂರು : ಟಿಪ್ಪರ್- ಬೈಕ್ ನಡುವೆ ಅಪಘಾತ: ಗಂಭೀರ ಗಾಯಗೊಂಡಿದ್ದ ಸಫ್ವಾನ್ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

0
IMG-20240222-WA0027.jpg

ಪುತ್ತೂರು: ಸಂಪ್ಯ ಕಲ್ಲಾರ್ಪೆ ಸಮೀಪ ಬುಧವಾರ ಸಂಜೆ ಟಿಪ್ಪರ್ ಹಾಗೂ ಬೈಕ್ ಮಧ್ಯೆ ಢಿಕ್ಕಿ ಸಂಭವಿಸಿ ಗಂಭೀರ ಗಾಯಗೊಂಡಿದ್ದ ಮುಕ್ವೆ ನಿವಾಸಿ ಸಫ್ವಾನ್ ಅವರು ಚಿಕಿತ್ಸೆ ಫಲಕಾರಿಯಾಗದೆ ಫೆ 22 ರಂದು ಬೆಳಗ್ಗೆ ನಿಧಾನರಾದರು.

ಟಿಪ್ಪರ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮುಕ್ವೆ ನಿವಾಸಿ ಅಬ್ದುಲ್ಲಾ ರವರ ಮಗ ಸಫ್ವಾನ್ ಗಂಭೀರ ಗಾಯಗೊಂಡಿದ್ದರು. ಕೊಡಲೇ ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆ ಗೆ ಕರೆ ತಂದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!