ಬಂಟ್ವಾಳ: ವೆಂಕಟರಮಣ ಕಾಲೇಜಿನಲ್ಲಿ ರಾ.ಸೆ.ಯೋ ಘಟಕ ಉದ್ಘಾಟನೆ
ಬಂಟ್ವಾಳ: ಬಂಟ್ವಾಳ ವೆಂಕಟರಮಣ ಕಾಲೇಜಿನಲ್ಲಿ ರಾ.ಸೆ.ಯೋ ಘಟಕ ಉದ್ಘಾಟನಾ ಸಮಾರಂಭ ಶನಿವಾರ ಕಾಲೇಜಿನ ಸಭಾಂಗಣದಲ್ಲಿ ಜರುಗಿತು.
ಮುಖ್ಯ ಅತಿಥಿಯಾಗಿ ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾಯೋಜನೆಯ ಸಂಯೋಜನಾಧಿಕಾರಿ ಡಾ.ನಾಗರತ್ನ ಕೆಎ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ರಾಷ್ಟ್ರೀಯ ಸೇವಾ ಯೋಜನೆಯ ಲಾಂಛನ ಅದು ಚಕ್ರ , ಚಕ್ರದಂತೆ ನಿರಂತರವಾಗಿ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿ ಕೊಳ್ಳಿ ಹಾಗೂ ಸಾಮಾಜಮುಖಿಯಾಗಿ ಬೆಳೆಯಲು ರಾ. ಸೆ. ಯೋ ಉತ್ತಮ ವೇದಿಕೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಕಾಲೇಜಿನ ಪ್ರಿನ್ಸಿಪಾಲರಾದ ಡಾ. ಸುಯೋಗ ವರ್ಧನ್ ಡಿ.ಎಂ ವಹಿಸಿದ್ದರು. ಅವರು ಮಾತನಾಡಿ ರಾ.ಸೆ.ಯೋ ವಿಶೇಷ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುದರಿಂದ ವ್ಯಕ್ತಿತ್ವ ವಿಕಾಸನಕ್ಕೆ ನಾಂದಿ ಯಾಗುತ್ತದೆ. ರಾ. ಸೆ.ಯೋ ಸಮಾಜಕ್ಕೆ ಸಹಬಾಳ್ವೆಯನ್ನು ಸಾರಿ ಹೇಳುತ್ತದೆ ಎಂದು ಹೇಳಿದರು.
ರಾ. ಸೆ. ಯೋ ಯೋಜನಾಧಿಕಾರಿಗಳಾದ ಡಾ. ವಿನಾಯಕ ಕೆ.ಸ್, ಸುಪ್ರೀತ್ ಕಡಕೋಲ್ ಉಪಸ್ಥಿತರಿದ್ದರು.






