ತಿರುಪತಿ: ರಸ್ತೆ ಅಪಘಾತದಲ್ಲಿ ಶಿಶು ಸೇರಿದಂತೆ 6 ಮಂದಿ ಮೃತ್ಯು
ಆಂಧ್ರ ಪ್ರದೇಶ: ತಿರುಪತಿ ಸಮೀಪದ ಇತೇಪಲ್ಲಿ ಗ್ರಾಮದಲ್ಲಿ ಭಾನುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಶಿಶು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ.
ಚಂದ್ರಗಿರಿ ಪೊಲೀಸರ ಪ್ರಕಾರ, ನಾಯ್ಡುಪೇಟೆ-ಪುತಲಪಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿವೇಗವಾಗಿ ಚಲಿಸುತ್ತಿದ್ದ ಕಾರು ಮೋರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ ಮತ್ತು ಕಾರು ಸ್ವಲ್ಪ ಸಮಯದಲ್ಲೇ ಬೆಂಕಿಗೆ ಆಹುತಿಯಾಗಿದೆ.
ಕಾರಿನಲ್ಲಿದ್ದ 8 ಮಂದಿಯಲ್ಲಿ 5 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ, ಚಂದ್ರಗಿರಿ ಪೊಲೀಸರು ಮೂವರು ಬದುಕುಳಿದವರನ್ನು ಚಿಕಿತ್ಸೆಗಾಗಿ ಎಸ್‌ವಿಆರ್‌ಆರ್ ಸರ್ಕಾರಿ ಜನರಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾಗಿಸಿದರು, ಆದರೆ ಗಾಯಗೊಂಡವರಲ್ಲಿ ಒಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಏತನ್ಮಧ್ಯೆ, ಮೃತರು ವಿಜಯನಗರ ಜಿಲ್ಲೆಯ ಪೂಸಪತಿರೇಗಾ ಮಂಡಲದ ಪೇರಾಪುರಂ ಗ್ರಾಮದವರು ಎಂದು ಚಂದ್ರಗಿರಿ ಪೊಲೀಸರು ಸುದ್ದಿಗಾರರಿಗೆ ತಿಳಿಸಿದರು.
ಪೊಲೀಸರು ಸಂಪೂರ್ಣ ಸುಟ್ಟು ಕರಕಲಾದ ಕಾರನ್ನು ರಾಷ್ಟ್ರೀಯ ಹೆದ್ದಾರಿಯ ಬದಿಗೆ ಸ್ಥಳಾಂತರಿಸಿದರು ಮತ್ತು ಅಪಘಾತದ ನಂತರ ಸ್ಥಗಿತಗೊಂಡ ಸಂಚಾರಕ್ಕೆ ಅನುವುಮಾಡಿಕೊಟ್ಟರು.





