ಕಾರ್ಯಕ್ರಮಕ್ಕೆ ಬಾರದ ಪತ್ನಿಗೆ ಚಾಕುವಿನಿಂದ ಇರಿದ ಪತಿ
ಬೆಂಗಳೂರು: ತಂಗಿಯ ನಿಶ್ಚಿತಾರ್ಥಕ್ಕೆ ಬಂದಿಲ್ಲವೆಂದು ವ್ಯಕ್ತಿಯೊಬ್ಬ ಆತನ ಪತ್ನಿಗೆ ಚಾಕುವಿನಿಂದ ಇರಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ದಿವ್ಯಶ್ರೀ (26)ಗೆ ಚಾಕು ಇರಿತಕ್ಕೊಳಗಾದವಳು. ಜಯಪ್ರಕಾಶ್ (32) ಚಾಕು ಇರಿದ ಪತಿ. ಸುಂಕದಕಟ್ಟೆ ಬಳಿಯ ಸೊಲ್ಲಾಪುರದಮ್ಮ ದೇವಸ್ಥಾನ ಬಳಿ ಫೆಬ್ರವರಿ 15ರ ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಜಯಪ್ರಕಾಶ್ ಹಾಗೂ ದಿವ್ಯಶ್ರೀ ಪರಸ್ಪರ ಪ್ರೀತಿಸಿ 2019 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಬ್ಬರ ಮದುವೆಗೆ ಪೋಷಕರ ವಿರೋಧವಿತ್ತು. ಹೀಗಾಗಿ ದಂಪತಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಅನಾರೋಗ್ಯ ಹಿನ್ನೆಲೆ ಮನೆಯ ಖರ್ಚೆಲ್ಲ ಪತ್ನಿಯೇ ನೋಡಿಕೊಳ್ಳುತ್ತಿದ್ದರು. ಮೊದಲು ಮೂಡಲಪಾಳ್ಯದಲ್ಲಿ ಮನೆಮಾಡಿಕೊಂಡು ದಂಪತಿ ವಾಸವಿದ್ದರು.




