February 3, 2026

ವಿಟ್ಲ : ನೋಂದಾಯಿತ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರಿಗೆ, ಅವರ ಅವಲಂಬಿತರಿಗೆ ಫೆ.19ರಂದು ಆರೋಗ್ಯ ತಪಾಸಣಾ ಶಿಬಿರ

0
IMG-20240218-WA0010.jpg

ವಿಟ್ಲ : ಕರ್ನಾಟಕ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಆಶ್ರಯದಲ್ಲಿ ನೋಂದಾಯಿತ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರಿಗೆ ದಿನಾಂಕ 19/02/2024 ರ ಸೋಮವಾರ ಬೆಳಿಗ್ಗೆ,10.00 ಜೆಸಿಐ ವಿಟ್ಲ ವತಿಯಿಂದ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಒಕ್ಕೆತ್ತೂರು ಲಯನ್ಸ್ ಸೇವಾ ಭವನ ಸಿಂಹಗಿರಿ ಒಕ್ಕೆತೂರ್ ಇಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.

ಶಿಬಿರಕ್ಕೆ ಬರುವಾಗ ಕಡ್ಡಾಯವಾಗಿ ಮಂಡಳಿಯಿಂದ ನೀಡಲಾದ ನೋಂದಣಿ ಕಾರ್ಡ್, ಆಧಾರ್ ಕಾರ್ಡ್ ಮತ್ತು ಅವಲಂಬಿತರು ಕಡ್ಡಾಯವಾಗಿ ಆಧಾರ್ ಕಾರ್ಡ್ ತರತಕ್ಕದ್ದು. ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕಾಗಿ ಸೂಚಿಸಲಾಗಿದೆ.

ವಿ.ಸೂ: ಶಿಬಿರಕ್ಕೆ ಆಗಮಿಸುವ ಫಲಾನುಭವಿಗಳಿಗೆ ಉಚಿತ ಕಿಟ್ ವಿತರಿಸಲಾಗುವುದು. ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!