ಮೋಹನ್ ಲಾಲ್ ಅಭಿನಯದ ‘ಮರಕ್ಕಾರ್’ ಸಿನಿಮಾ ಟೆಲಿಗ್ರಾಂ ನಲ್ಲಿ ಹರಿಯಬಿಟ್ಟ ವ್ಯಕ್ತಿಯ ಬಂಧನ
ಕೋಟ್ಟಯಂ: ಮೋಹನ್ ಲಾಲ್ ಅಭಿನಯದ ‘ಮರಕ್ಕಾರ್ ಅರಬ್ಬೀ ಕಡಲಿಂಡೆ ಸಿಂಹ’ ಸಿನಿಮಾ ಟೆಲಿಗ್ರಾಂ ನಲ್ಲಿ ಹರಿಯಬಿಟ್ಟ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಕಂಜಿರಪಲ್ಲಿ ಮೂಲದ ನಸೀಫ್ ಎಂಬಾತನನ್ನು ಕೊಟ್ಟಾಯಂ ಎಸ್‌ಪಿಡಿ ಶಿಲ್ಪಾ ನೇತೃತ್ವದ ಪೊಲೀಸ್ ತಂಡ ಆರೋಪಿಯನ್ನು ಬಂಧಿಸಿದ್ದಾರೆ.
‘ಸಿನಿಮಾ ಕಂಪನಿ’ ಎಂಬ ಟೆಲಿಗ್ರಾಂನ ಗ್ರೂಪ್ ಮೂಲಕ ಚಿತ್ರದ ನಕಲಿ ಪ್ರಿಂಟ್ ಅಪ್ಲೋಡ್ ಮಾಡಿದ್ದಾನೆ. ಪ್ರಿಂಟ್ ಚೆನ್ನಾಗಿದೆ, ಆಡಿಯೋ ಹೆಡ್ ಸೆಟ್ ಹಾಕಿಕೊಂಡು ಕೇಳಬೇಕು ಎಂದು, ಸಿನಿಮಾವನ್ನು ವಿವಿಧ ಗ್ರೂಪ್ ಗಳಿಗೆ ಕಳುಹಿಸಿದ್ದ ವ್ಯಕ್ತಿಯ ಮೇಲೆ ಸೈಬರ್ ಪೊಲೀಸರು ನಿಗಾ ಇಟ್ಟಿದ್ದರು. ಇಂದು ಬೆಳಗ್ಗೆ ಎರುಮೇಲಿ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಿಂದ ಆತನನ್ನು ಬಂಧಿಸಲಾಗಿದೆ. ಆರೋಪಿ ನಸೀಫ್ ಮೊಬೈಲ್ ಅಂಗಡಿ ಮಾಲಕನಾಗಿದ್ದಾನೆ.
ಮುಂದಿನ ದಿನಗಳಲ್ಲಿ ಮರಕ್ಕಾರ್ ಚಿತ್ರದ ನಕಲಿ ಚಿತ್ರಗಳನ್ನು ಹಬ್ಬಿಸುತ್ತಿರುವ ಇನ್ನಷ್ಟು ಮಂದಿಯನ್ನು ಬಂಧಿಸುವ ಸೂಚನೆಗಳಿವೆ. ಇವರಲ್ಲಿ ಹಲವರು ಸೈಬರ್ ಪೊಲೀಸರ ಕಣ್ಗಾವಲಿನಲ್ಲಿದ್ದಾರೆ.





