December 16, 2025

ಬೆಳ್ತಂಗಡಿ: ಆನ್ ಲೈನ್ ಮೂಲಕ ಲಕ್ಷಾಂತರ ರೂ. ವಂಚನೆ: ಪ್ರಕರಣ ದಾಖಲು
 

0
fraud_1668015357264_1668015357396_1668015357396.jpg


ಬೆಳ್ತಂಗಡಿ: ಟೆಲಿಗ್ರಾಮ್ ಆಪ್ ನಲ್ಲಿ ಡಾಟ ರೇಡ್‌ ಎಂಬ ಕಂಪನಿಯಿಂದ ಬಂದ ಲಿಂಕ್‌ ಮೂಲಕ ಆನ್ ಲೈನ್ ಪ್ರೊಡಕ್ಟ್ ಗೆ ರೇಟಿಂಗ್ ಮಾಡುವ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವರಿಗೆ ಲಕ್ಷಾಂತರ ರೂಪಾಯಿ ವಂಚನೆಯಾದ ಘಟನೆ ಫೆಬ್ರವರಿ 2 ರಂದು ನಡೆದಿದೆ. ಈ ಘಟನೆಯ ಸಂಬಂಧ ಇದೀಗ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಂಚನೆಗೊಳಗಾದ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮ ನಿವಾಸಿ ನುಪೈಲಾ ಕೆ ಐ (26) ಎಂಬುವವರು ದೂರು ನೀಡಿರುತ್ತಾರೆ.

ನುಪೈಲಾ ಅವರು ನೀಡಿದ ದೂರಿನಲ್ಲಿ ಡಾಟ ರೇಡ್‌ ಎಂಬ ಸಂಸ್ಥೆಯವರೆಂದು ಪರಿಚಯಿಸಿಕೊಂಡ ಅಪರಿಚಿತ ವ್ಯಕ್ತಿಯೋರ್ವ ತಾನು ಕೆಲಸ ನಿರ್ವಹಿಸುವ ವೇಳೆ 900 ರೂ. ಅನ್ನು ಅವರ ಖಾತೆಗೆ ವರ್ಗಾಯಿಸಿರುತ್ತಾರೆ. ಆ ಬಳಿಕ ಫೆಬ್ರವರಿ 8 ರಿಂದ ಫೆಬ್ರವರಿ 12 ರ ಅವಧಿಯಲ್ಲಿ ವಿವಿಧ ಖಾತೆಗಳಿಗೆ ತನ್ನ ಖಾತೆಯಿಂದ ಆನ್ ಲೈನ್ ಮೂಲಕ ಒಟ್ಟು 6,95,148 ರೂಪಾಯಿ ವರ್ಗಾವಣೆ ಮಾಡಿಕೊಂಡಿರುತ್ತಾನೆ. ಆತ ವರ್ಗಾವಣೆ ಮಾಡಿಕೊಂಡ ಹಣವನ್ನು ಮರುಪಾವತಿಸದೆ ಆನ್‌ ಲೈನ್‌ ಮೂಲಕ ವಂಚಿಸಿರುವುದಾಗಿ ತಿಳಿಸಿದ್ದಾರೆ.

ಇನ್ನು ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 419,420, 66(ಡಿ) ಮತ್ತು ಐಟಿ ಕಾಯಿದೆಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.”

Leave a Reply

Your email address will not be published. Required fields are marked *

error: Content is protected !!