ಉಳ್ಳಾಲ: ಐಸ್ ಕ್ರೀಮ್ ಪಾರ್ಲರ್ ವೈಟರ್ ಆತ್ಮಹತ್ಯೆ
ಉಳ್ಳಾಲ: ಐಸ್ ಕ್ರೀಮ್ ಪಾರ್ಲರ್ ವೈಟರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲದ ಪಿಲಾರ್ ಎಂಬಲ್ಲಿ ನಡೆದಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆಯ ಬೆಳ್ಳಾರೆ ಹಳ್ಳಿ ನಿವಾಸಿ ಯೋಗೇಶ್ (31) ಎಂಬವರು ಆತ್ಮಹತ್ಯೆ ಮಾಡಿಕೊಂಡವರು.
ಪಿಲಾರ್ ಗೋಡೌನ್ ಒಂದರಲ್ಲಿ ಯೋಗೇಶ್ ಆತ್ಮಹತ್ಯೆ ಮಾಡಿಕೊಂಡಿದ್ದು, ಮುಂಜಾನೆ ಶಟಲ್ ಆಡುತ್ತಿದ್ದ ಯುವಕರು ಯೋಗೆಶ್ ಅವರನ್ನು ನೋಡಿದ್ದು, ಆಟವಾಡುತ್ತಿದ್ದಾಗ ಕಿಟಕಿ ತೆರೆದು ನೋಡಿದ್ದಾಗಿ ಹೇಳಿದ್ದಾರೆ.
ಯುವಕರು ಆಟವಾಡಿ ತೆರಳಿದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್‌ನೋಟ್‌ನಲ್ಲಿ ತನ್ನ ಸಾವಿಗೆ ತಾನೇ ಕಾರಣ ಎಂದು ಬರೆದಿದ್ದಾರೆ. ತೊಕ್ಕೊಟ್ಟಿನ ರಾಯನ್ಸ್ ಕ್ರೀಮ್ ಪಾರ್ಲರ್‌ನಲ್ಲಿ ಕಳೆದ ಏಳು ವರ್ಷದಿಂದ ಯೋಗೇಶ್ ಕೆಲಸ ಮಾಡುತ್ತಿದ್ದರು.
ಬಹುತೇಕ ಸ್ಥಳಿಯ ಎಲ್ಲರಿಗೂ ಪರಿಚಿತರಾಗಿರುವ ಯೋಗೇಶ್ ಪಿಲಾರಿನ ಗೋಡೌನ್‌ಲ್ಲಿ ಸ್ನೇಹಿತರ ಜೊತೆ ವಾಸವಾಗಿದ್ದ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.





