ಪುತ್ತೂರು: ಫೆಬ್ರವರಿ 11ಕ್ಕೆ ‘ರೋಯಲ್ ಕ್ರೌನ್’ ರೆಸ್ಟೋರೆಂಟ್ ಶುಭಾರಂಬ
ಪುತ್ತೂರು: ಪುತ್ತೂರಿನ ಹೃದಯ ಭಾಗದಲ್ಲಿ ನೂತನವಾಗಿ ಆರಂಭವಾದ ‘ರೋಯಲ್ ಕ್ರೌನ್’ ರೆಸ್ಟೋರೆಂಟ್ ಫೆಬ್ರವರಿ 11 ಆದಿತ್ಯವಾರ ಬೆಳಗ್ಗೆ 10 ಗಂಟೆಗೆ ಶುಭಾರಂಬಗೊಳ್ಳಲಿದೆ.

ಪುತ್ತೂರು ಬಸ್ ನಿಲ್ದಾಣದ ನೂತನವಾಗಿ ಆರಂಭಗೊಳ್ಳಲಿರುವ ರೆಸ್ಟೋರೆಂಟ್ ಗೆ ಸಯ್ಯದ್ ಅಹ್ಮದ್ ಪೂಕೋಯ ತಂಗಳ್ ದುವಾ ನೆರವೇರಿಸಲಿದ್ದಾರೆ. ಕರ್ನಾಟಕ ಸರ್ಕಾರದ ಸಭಾದ್ಯಕ್ಷರಾದ ಯು.ಟಿ ಖಾದರ್ ಉದ್ಘಾಟನೆ ನಡೆಸಲಿದ್ದಾರೆ. ಕಾರ್ಯಕ್ರಮದಲ್ಲಿ ಶಾಸಕರಾದ ಅಶೋಕ್ ಕುಮಾರ್ ರೈ, ಮಾಜಿ ಶಾಸಕರಾದ ಸಂಜೀವ ಮಠಂದೂರ್, ಫಾದರ್ ಲಾರೆನ್ಸ್ ಮಸ್ಕರೇನಸ್ ಮುಂತಾದ ಅನೇಕ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ.




