ಪುಣಚ: ಖಿಲರ್ ಹಾಗೂ ಅಜ್ಮೀರ್
ಮೌಲಿದ್ ಪ್ರಥಮ ವಾರ್ಷಿಕ, ಏಕದಿನ ಮತ ಪ್ರಭಾಷಣ ಕಾರ್ಯಕ್ರಮ
ಖಿಲ್ ರಿಯ ಮಸ್ಜಿದ್ ಪಾಲಸ್ತಡ್ಕ ಪುಣಚ ಸಮಿತಿ ವತಿಯಿಂದ ಖಿಲರ್ ಹಾಗೂ ಅಜ್ಮೀರ್
ಮೌಲಿದ್ ಪ್ರಥಮ ವಾರ್ಷಿಕ ಹಾಗೂ ಏಕದಿನ ಮತ ಪ್ರಭಾಷಣ ಕಾರ್ಯಕ್ರಮವನ್ನು ಜಿಸ್ಥಿಯ ನಗರದಲ್ಲಿ
ಹಮ್ಮಿಕೊಳ್ಳಲಾಯಿತು.
ಖಿಲ್ ರ್ ಮತ್ತು ಅಜ್ಮೀರ್ ಮೌಲಿದ್ ಪ್ರತಿ ತಿಂಗಳು ಖಿಲ್ ರಿಯ ಮಸ್ಜಿದ್ನಲ್ಲಿ ಸರ್ವ ಧರ್ಮೀಯರ ಸೌಹಾರ್ದತೆಗೆ ಸಾಕ್ಷಿಯಾದಂತಹ ಪುಣಚ ಜುಮ ಮಸ್ಜಿದ್ ನಲ್ಲಿ ಹಲವಾರು ವರ್ಷಗಳಿಂದ ಖತೀಬ್ ಉಸ್ತಾದರಾಗಿ ಸೇವೆ ಸಲ್ಲಿಸಿರುವಂತಹ ಅನೇಕ ಆಧ್ಯಾತ್ಮಿಕ ದಿಖ್ರು ದುಃಅ ಆತ್ಮೀಯ ಮಜಿಲಿಸುಗಳಿಗೆ ನೇತೃತ್ವವನ್ನು ನೀಡಿರುವಂತಹ ಬಿ.ಎಂ.ಮಹಮ್ಮದ್ ದಾರಿಮಿ ಅವರ ನೇತೃತ್ವದಲ್ಲಿ ನಡೆದವು.
ಅದರ ವಾರ್ಷಿಕ ಮಗ್ರಿಬ್ ನಮಾಜ್ ಬಳಿಕ ಉಸ್ತಾದ್ ಅವರ ನೇತೃತ್ವದಲ್ಲಿ ಖಿಲರಿಯ ಮಸ್ಜಿದ್ ನಲ್ಲಿ ನಡೆಯಿತು.
ಕ್ವಾಜಾ ಗರೀಬ್ ನವಾಜ್ ವೇದಿಕೆಯಲ್ಲಿ ಪ್ರಾರಂಭದಲ್ಲಿ ಮಾಸ್ಟರ್ ಫಾಝಿಲ್ ಪುಣಚ ಕಿರಾಅತ್ ಪಟಿಸಿದರು.
ದುಆ ನೇತೃತ್ವವನ್ನು : ಬಹು। ಅಬ್ದುಲ್ ಸಲಾಂ ಜಲಾಲಿ ಅಲ್ ಇರ್ಫಾನಿ (ಉಸ್ತಾದ್ ಖಿಲ್ ರಿಯಾ ಮಸ್ಜಿದ್ ) ನೆರವೇರಿಸಿದರು.
ವೇದಿಕೆಯ ಅಧ್ಯಕ್ಷತೆಯನ್ನು: ಜ ಯು.ಟಿ. ಮುಹಮ್ಮದ್ ಅಲಿ (ಅಧ್ಯಕ್ಷರು, ಖಿಲ್ ರಿಯಾ ಮಸ್ಜಿದ್ ಪಾಲಸ್ತಡ್ಕ ) ನೆರವೇರಿಸಿದರು.
ಕರೀಂ ನಾಟೆಕ್ಕಲ್(ಜಿಸ್ಥಿಯ ನಗರ) ವೇದಿಕೆಯಲ್ಲಿರುವಂತಹ ಗಣ್ಯ ಅತಿಥಿಗಳನ್ನು, ಮುಖ್ಯಪ್ರಭಾಶಕರಾದ ಉಸ್ತಾದರನ್ನು ಸ್ವಾಗತಿಸಿದರು.
ಉದ್ಘಾಟನೆಯನ್ನು: ಬಹು ಬಿ.ಎಂ. ಮುಹಮ್ಮದ್ ದಾರಿಮಿ ( ಖತೀಬ್ ಉಸ್ತಾದ್ ಪುಣಚ ) ನೆರವೇರಿಸಿದರು.
ಬಹು ಇಬ್ರಾಹಿಂ ಕೌಸರಿ (ಸದರ್ ಉಸ್ತಾದ್ ಪುಣಚ)
ಪ್ರಸ್ತಾವಿಕ ಪ್ರಭಾಷಣ ಗೈದರು.
ಎಂ.ಎಸ್. ಮಹಮ್ಮದ್ (ಅಧ್ಯಕ್ಷರು, ಜುಮಾ ಮಸೀದಿ ಪರಿಯಾಲ್ತಡ್ಕ ) ಧಾರ್ಮಿಕ ಪ್ರಬೋಧನೆ ಇವತ್ತಿನ ಕಾಲಘಟ್ಟದಲ್ಲಿ ಎಷ್ಟು ಮುಖ್ಯ ಅನ್ನೋದರ ಕುರಿತು ತನ್ನ ಪ್ರಭಾಷಣದಲ್ಲಿ ವ್ಯಕ್ತಪಡಿಸಿದರು.
ಶಾಫಿ ಮಾಳಿಗೆ (ಅಧ್ಯಕ್ಷರು, ಜುಮಾ ಮಸೀದಿ ಪುಣಚ )
ಪ್ರಾಸ್ತಾವಿಕ ನುಡಿಗಳ ಮೂಲಕ ಶುಭ ಹಾರೈಸಿದರು.
ಮುಹಮ್ಮದ್ ಶರೀಫ್ ರೋಯಲ್ (ಅಧ್ಯಕ್ಷರು ಅನ್ಸಾರಿಯಾ ಜುಮಾ ಮಸೀದಿ ಬುಳೇರಿಕಟ್ಟಿ,
ಫಾರೂಕ್ ಇಂಜಿನಿಯರ್’ (ಅಧ್ಯಕ್ಷರು, ಅನ್ಸಾರಿಯಾ ಜುಮಾ ಮಸೀದಿ, ಮಂಜ ),
ಏಕೆ. ಹಮೀದ್ (ಅಧ್ಯಕ್ಷರು, ಸಾಜ ಜಮಾ ಮಸೀದಿ)
ರಝಾಕ್ ಹಾಜಿ ಮಣಿಲ (ಗಲ್ಫ್ ಉದ್ಯಮಿಗಳು),
ಸುಲೈಮಾನ್ ಹಾಜಿ ಪುಣಚ (ಗಲ್ಫ್ ಟೂರ್ಸ್ & ಟ್ರಾವೆಲ್ಸ್ ಪುತ್ತೂರು ),
ಮಹಮ್ಮದ್ ಅಲಿ (ಮಾಲಕರು, ಸಿಟಿ ಸೂಪರ್ ಬಝಾರ್, ಪರಿಯಾಳ್ತಡ್ಕ ),
ಬಿ. ಅಬ್ದುಲ್ ಹಕೀಂ ಬಳೇರಿಕಟ್ಟೆ (ಸುಪ್ರೀಂ)
ಹಸೈನಾರ್ ಪಾಲಸ್ಥಡ್ಕ ( ಮಾಜಿ ಅಧ್ಯಕ್ಷರು, ಖಿಲ್ ರಿಯಾ ಮಸ್ಜಿದ್ ಪಾಲಸ್ತಡ್ಕ )
ಮಹಮ್ಮದ್ ಮಲ್ಲಿಕಟ್ಟೆ ( ಗೌರವಾಧ್ಯಕ್ಷರು ಖಿಲರಿಯ ಮಸ್ಜಿದ್ ಪಾಲಸ್ತಡ್ಕ ),
ಜ : ಇಬ್ರಾಹಿಂ ಹಾಜಿ ಮಾಳಿಗೆ,
ಕೆ.ಬಿ. ಅಶ್ರಫ್, ಬಳ್ಳೇಕಟ್ಟೆ (ಆಧ್ಯಕ್ಷರು, ಸರ್ಕಾರಿ ಪ್ರೌಢಶಾಲೆ, ಬೀಡು),
ಹಾಗೂ ಇನ್ನಿತರ ಗಣ್ಯ ವ್ಯಕ್ತಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಖ್ಯಾತ ಕಾರ್ಯಕ್ರಮ ನಿರೂಪಕರಾದಂತಹ ನೂರ್ ಮಹಮ್ಮದ್ ನೀರ್ಕಜೆ MC ನಿರೂಪಣೆಗೈದರು.
ಏಕದಿನ ಮತ ಪ್ರಭಾಷಣದ ಕೇಂದ್ರ ಬಿಂದು ಪ್ರಭಾಷಣ ಪೀಠದ ಅನುಗ್ರಹಿತ ಪ್ರಭಾಷಕ ತನ್ನ ವಾಕ್ಚಾತುರ್ಯದ ಮೂಲಕ ಇಸ್ಲಾಮಿನ ಚರಿತ್ರೆಗಳನ್ನು ಮುಸ್ಲಿಂ ಉಮ್ಮತ್ತಿನ
ಮನಸ್ಸಿನ ಅಂತರಾಳದಲ್ಲಿ ಪರಿವರ್ತನೆಯ ಅಲೆಯನ್ನು ಸೃಷ್ಟಿಸಿ ಧಾರ್ಮಿಕ ಪ್ರಬೋಧನೆಯ ಅರಿವನ್ನು ಮೂಡಿಸಬಲ್ಲ, ತನ್ನ ವೈವಿಧ್ಯತೆಯ ಪ್ರಭಾಷಣ ಶೈಲಿಯೊಂದಿಗೆ ಕೇರಳದ ಮಲಪುರಂ ಜಿಲ್ಲೆ ಹಾಗೂ ಇನ್ನಿತರ ಸ್ಥಳಗಳಲ್ಲಿ ಪ್ರಚಲಿತದಲ್ಲಿರುವ ಹೆಸರಾಂತ ಪ್ರಭಾಶಕ ಉಸ್ತಾದ್ ಸ್ವಾಲಿಹ್ ಹುದವಿ ವಳಂಜೇರಿ ಕುಟುಂಬ ಜೀವನ ಎನ್ನುವ ಕಾಲಿಕ ಪ್ರಸಕ್ತವಾದ ವಿಷಯವನ್ನು ಆಸ್ಪದವಾಗಿಟ್ಟುಕೊಂಡು ಪ್ರಡೋಜ್ವಲ ಪ್ರಭಾಷಣಕ್ಕೆ ನೇತೃತ್ವವನ್ನು ನೀಡಿದರು.
ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು
ಖಿಲ್ರಿಯಾ ಮಸ್ಜಿದ್ ಪಾಲಸ್ತಡ್ಕ ಪುಣಚ ಸಮಿತಿ ಕಾರ್ಯದರ್ಶಿ : ನಿಝಾಮ್ ಪಾಲಸ್ಥಡ್ಕ,
ಖಜಾಂಚಿ : ಲತೀಫ್ ರಿಂಗ್ ಪಾಲಸ್ತಡ್ಕ,
ಇಕ್ಬಾಲ್ ಪಾಲಸ್ತಡ್ಕ, ಹನೀಫ್ ಪಾಲಸ್ತಡ್ಕ,ಅಬ್ದುಲ್ಲ ಪಾಲಸ್ತಡ್ಕ, ಅಬೂಬಕ್ಕರ್ ಪಾಲಸ್ತಡ್ಕ ಹಾಗೂ ಇನ್ನಿತರ ಸಮಿತಿ ಸದಸ್ಯರು ತನು ಮನ ಧನದಿಂದ ಸಹಕರಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ತಬರ್ರ್ ಕ್ ವಿತರಣೆ ನಡೆಸಲಾಯಿತು.
ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಖಿಲ್ ರಿಯ ಮಸ್ಜಿದ್ ಪಾಲಸ್ತಡ್ಕ ಪುಣಚ




