March 21, 2026

ವಿಟ್ಲ: ಡಿಪಾರ್ಟ್‌ಮೆಂಟ್ ಆಫ್ ಪೋಸ್ಟ್, ಇಂಡಿಯಾ ವತಿಯಿಂದ ಚಿತ್ರಕಲಾ ಸ್ಪರ್ಧೆ: ವಿಠಲ ಪ್ರೌಢಶಾಲೆಯ ವಿದ್ಯಾರ್ಥಿ ಕೌಶಿಕ್ ರಾಜ್ಯ ಮಟ್ಟಕ್ಕೆ ಆಯ್ಕೆ

0
IMG-20240205-WA0049.jpg

ವಿಟ್ಲ: ‘ಡಿಪಾರ್ಟ್‌ಮೆಂಟ್ ಆಫ್ ಪೋಸ್ಟ್,ಇಂಡಿಯಾ’ ಇವರು ನಡೆಸಿದ ಚಿತ್ರಕಲಾ ಸ್ಪರ್ದ್ಧೆಯಲ್ಲಿ ವಿಠಲ ಪ್ರೌಢಶಾಲೆಯ 9 ನೇ ತರಗತಿಯ ವಿದ್ಯಾರ್ಥಿ ಕೌಶಿಕ್ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ.

ಬಹುಮಾನ ವಿತರಣ ಕಾರ್ಯಕ್ರಮವು ಪುತ್ತೂರು ಹೆಡ್ ಪೋಸ್ಟ್ ಆಫೀಸಿನಲ್ಲಿ ನಡೆದಿದ್ದು, ಉಷಾ ಕೆ ಆರ್ (ಡೆಪ್ಯೂಟಿ ಸುಪರಿಂಟೆಂಡೆಂಟ್ ಆಫ್ ಪೋಸ್ಟ್ ಆಫೀಸಸ್), ಚಂದ್ರ ನಾಯ್ಕ ಎಂ (ಅಸಿಸ್ಟೆಂಟ್ ಸುಪರಿಂಟೆಂಡೆಂಟ್ ಆಫ್ ಪೋಸ್ಟ್ ಆಫೀಸಸ್), ಸುಮಾ ಹೆಚ್ ಎಸ್ (ಆಫೀಸ್ ಅಸಿಟ್ಟೆಂಟ್,ಪುತ್ತೂರು) ಮತ್ತು ವಿಠಲ ಪ್ರೌಢಶಾಲೆಯ ಉಪಪ್ರಾಂಶುಪಾಲರಾದ ಕಿರಣ್ ಕುಮಾರ್ ಬ್ರಹ್ಮಾವರ ಉಪಸ್ಥಿತರಿದ್ದರು.

ಕೌಶಿಕ್ ಇವರು ವಿಟ್ಲದ ಶಿವಾಜಿನಗರದ ವಸಂತ ಎನ್ ಮತ್ತು ಪಾರ್ವತಿ ಡಿ ದಂಪತಿಗಳ ಪುತ್ರನಾಗಿರುತ್ತಾನೆ.

Leave a Reply

Your email address will not be published. Required fields are marked *

You may have missed

error: Content is protected !!