March 21, 2026

ಬಂಟ್ವಾಳ: ಕಲ್ಲುರ್ಟಿ ಕಲ್ಕುಡ ದೈವಕ್ಕೆ ಹರಕೆ ಕೋಲ ನೀಡಿ ದೈವ ಭಕ್ತಿ ಮೆರೆದ ಯು.ಟಿ.ಖಾದರ್

0
image_editor_output_image-711428286-1707125798220.jpg

ಬಂಟ್ವಾಳ: ತುಳುನಾಡಿನ ಕಾರ್ಣಿಕದ ದೈವಗಳಾದ ಕಲ್ಲುರ್ಟಿ ಕಲ್ಕುಡ ದೈವಕ್ಕೆ ಹರಕೆ ಕೋಲ ನೀಡಿ ಯು.ಟಿ ಖಾದರ್ ತಮ್ಮ ದೈವ ಭಕ್ತಿ ಮೆರೆದಿದ್ದಾರೆ.

ಬಂಟ್ವಾಳದ ಪನೋಳಿ ಬೈಲು ಕಲ್ಲುರ್ಟಿ ಕಲ್ಕುಡ ಕ್ಷೇತ್ರದಲ್ಲಿ ತಮ್ಮ ಹರಕೆಯ ಕೋಲವನ್ನು ನೀಡಿ ದೈವದ ಆಶೀರ್ವಾದ ಪಡೆದುಕೊಂಡಿದ್ದಾರೆ. ಕೋಲ ಆರಂಭದಿಂದ ಕೊನೆಯವರೆಗೂ ಇದ್ದ ಯು.ಟಿ.ಖಾದರ್ ಅವರಿಗೆ ಹಲವು ಕಾಂಗ್ರೆಸ್ ನಾಯಕರು ಸಾತ್ ನೀಡಿದ್ದರು.

ಮುಡಿಪು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಪ್ರಶಂತ್ ಕಾಜಾವ ಸೇರಿದಂತೆ ಹಲವರು ಖಾದರ್ ಅವರ ಜೊತೆಗಿದ್ದರು. ಕೋಲದ ಕೊನೆಯಲ್ಲಿ ದೈವದ ಪ್ರಸಾದ ಸ್ವೀಕರಿಸಿದ ಖಾದರ್‌ ಕಲ್ಲುರ್ಟಿ ಕಲ್ಕುಡ ದೈವದ ಆಶೀರ್ವಾದ ಪಡೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!