ಮಡಿಕೇರಿ: ಚೇಲವಾರ ಫಾಲ್ಸ್‌ನಲ್ಲಿ ಮುಳುಗಿ ಯುವಕ ಮೃತ್ಯು
ಮಡಿಕೇರಿ: ಕೊಡಗು ಜಿಲ್ಲೆ ನಾಪೋಕ್ಲುವಿನ ಚೆಯ್ಯಂಡಾಣೆ ಗ್ರಾಮದ ಚೇಲವಾರ ಫಾಲ್ಸ್‌ನಲ್ಲಿ ಮುಳುಗಿ ಯುವಕನೊಬ್ಬ ನೀರುಪಾಲಾದ ಘಟನೆ ನಡೆದಿದೆ.
ಕೊಡಗಿಗೆ ಪ್ರವಾಸಕ್ಕೆಂದು ಕೇರಳದಿಂದ ಬಂದಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಕೇರಳದ ಇರಿಟ್ಟಿಯ ರಶೀದ್ (25) ಮೃತ ಯುವಕ ಎಂದು ಗುರುತಿಸಲಾಗಿದೆ.
ಚೆಯ್ಯಂಡಾಣೆ ಸಮೀಪದ ಚೇಲವಾರ ಫಾಲ್ಸ್ನಲ್ಲಿ ಈ ಘಟನೆ ನಡೆದಿದೆ. ಚೇಲಾವರ ಫಾಲ್ಸ್‌ಗೆ ಬಂದಿದ್ದ ರಶೀದ್ ಈಜಲು ನೀರಿಗೆ ಇಳಿದಿದ್ದ ಎಂದು ತಿಳಿದುಬಂದಿದೆ.




