February 2, 2026

ಬೆಳ್ತಂಗಡಿ: ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದು ಎಳೆದುಕೊಂಡ ಹೋದ ಬಸ್: ಸವಾರ ಮೃತ್ಯು

0
IMG-20240204-WA0047.jpg

ಬೆಳ್ತಂಗಡಿ: ಖಾಸಗಿ ಬಸ್ಸಿನ ವೇಗದ ಅವಂತಾರದಿಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಸ್ವಲ್ಪ ದೂರು ಎಳೆದುಕೊಂಡ ಹೋದ ಪರಿಣಾಮ ಸವಾರ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಮಂಜೊಟ್ಟಿ ಸಮೀಪ ಫೆ.4 ರಂದು(ಇಂದು) ಸಂಜೆ ನಡೆದಿದೆ.

ಮೃತಪಟ್ಟ ಯುವಕ ಮಂಜೊಟ್ಟಿ ಸಮೀಪದ ಪರಾರಿ ನಿವಾಸಿ ಧರಣೇಂದ್ರ (24) ಎನ್ನಲಾಗಿದೆ. ಬೆಳ್ತಂಗಡಿ ಕಡೆಯಿಂದ ತನ್ನ ಮನೆ ಮಂಜೊಟ್ಟಿ ಕಡೆಗೆ ದ್ವಿಚಕ್ರ ವಾಹನದಲ್ಲಿ ಹೋಗುತಿದ್ದ ವೇಳೆ ಬೆಳ್ತಂಗಡಿ ಕಡೆಗೆ ವೇಗವಾಗಿ ಬರುತಿದ್ದ ಶ್ರೀ ದುರ್ಗಾ ಹೆಸರಿನ ಖಾಸಗಿ ಬಸ್ ಡಿಕ್ಕಿ ಹೊಡೆದು ನಂತರ ಸ್ವಲ್ಪ ದೂರ ಸ್ಕೂಟರ್ ಸಮೇತ ಬಸ್ ಎಳೆದುಕೊಂಡು ಹೋಗಿದೆ.

ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರನ ತಲೆಗೆ ಗಂಭೀರ ಗಾಯಗೊಂಡಿದ್ದು.ತಕ್ಷಣ ಸ್ಥಳೀಯರು ಉಜಿರೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!