ಬಂಟ್ವಾಳ: ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ: ಗೋ ಮಾಂಸ ಸಹಿತ ಓರ್ವ ವಶಕ್ಕೆ
ಬಂಟ್ವಾಳ: ಅಕ್ರಮವಾಗಿ ದನಗಳನ್ನು ಕಡಿದು ಮಾಂಸ ಮಾಡುತ್ತಿದ್ದ ಕಸಾಯಿಕಾನೆಗೆ ಬಂಟ್ವಾಳ ನಗರ ಠಾಣಾ ಎಸ್. ಐ.ರಾಮಕೃಷ್ಣ ನೇತ್ರತ್ವದ ಪೋಲೀಸ್ ತಂಡ ದಾಳಿ ನಡೆಸಿ ಕಿಂಟ್ಚಾಲ್ ಗಟ್ಟಲೆ ಮಾಂಸ ಸಹಿತ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ, ದಾಳಿಯ ವೇಳೆ ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.
ಕಲ್ಲಡ್ಕ ಗೋಳ್ತಮಜಲು ಮದಕ ನಿವಾಸಿ ಸಿದ್ದೀಜ್ ಎಂಬಾತನನ್ನು ಪೋಲೀಸರು ಬಂಧಿಸಿದ್ದಾರೆ. ಇನ್ನು ನಜೀರ್ ಮತ್ತು ಸುಲೈಮಾನ್ ಎಂಬ ಇಬ್ಬರು ಆರೋಪಿಗಳು.
ಆರೋಪಿ ನಜೀರ್ ಎಂಬಾತನ ಮನೆಯ ಹಿಂಬದಿಯ ಶೆಡ್ ನಲ್ಲಿ ಅಕ್ರಮ ಕಸಾಯಿಕಾನೆ ನಡೆಸುತ್ತಿದ್ದರು.
ಮಾರಾಟ ಮಾಡಲು ತಯಾರಿಸಿದ್ದ , ಎರಡು ಕಿಂಟ್ಚಾಲ್ ದನದ ಮಾಂಸ ಕೃತ್ಯಕ್ಕೆ ಬಳಸಿದ ಅಲ್ಟೋ ಕಾರ್,ರಿಕ್ಷಾ ಮತ್ತು ಸ್ಕೂಟಿ ಮರದ ತುಂಡು,ತೂಕದ ಮಾಪನ ಹಾಗೂ ಕತ್ತಿ ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆಸಿಕೊಂಡಿದ್ದಾರೆ.
ಎಸ್. ಐ.ರಾಮಕೃಷ್ಣ ನೇತ್ರತ್ವದಲ್ಲಿ ದಾಳಿ ನಡೆಸಿದ್ದು, ಪರಾರಿಯಾಗಿರುವ ಇನ್ನಿಬ್ಬರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ..




